ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರಿಂದ ಸಮಸ್ಯೆ ಆಗುವ ಮೊದಲೇ ಸಿಎಂ ಬಸವರಾಜ್ ಬೊಮ್ಮಾಯಿ ಎಚ್ಚೆತ್ತುಕೊಂಡಿದ್ದಾರೆ. ಹೆಚ್. ವಿಶ್ವಾನಾಥ್ ಸರ್ಕಾರಕ್ಕೆ ಯಾವುದೇ ಮುಜುಗರ ಆಗುವಂತೆ ನಡೆದುಕೊಳ್ಳಬಾರದು ಎಂಬ ಸಿಎಂ ಪ್ರಯತ್ನ ಫಲಪ್ರದವಾಗಿದೆ. ಹಾಗಾಗಿ ವಿಶ್ವಾನಾಥ್ ಆಸೆಯಂತೆ ಅಳಿಯನಿಗೆ ಆಯಕಟ್ಟಿನ ಮುಖ್ಯ ಇಂಜಿನಿಯರ್ ಆಗಿ ವರ್ಗಾವಣೆ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.
ಹೆಚ್.ಸಿ ರಮೇಂದ್ರಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸಿಎಂಗೆ ದುಂಬಾಲು ಬಿದ್ದಿದ್ದ ವಿಶ್ವನಾಥ್ ಆಸೆಯನ್ನು ಈಡೇರಿಕೆಯಾಗಿದೆ.
ಕೊನೆಗೂ ತಾವು ಗೃಹ ಸಚಿವರಾಗಿದ್ದಾಗ ವಿಶ್ವನಾಥ್ ಮಾಡಿದ ಬೇಡಿಕೆಯನ್ನು ಸಿಎಂ ಆದ ಮೇಲೆ ಬೊಮ್ಮಾಯಿ ಈಡೇರಿಸಿದ್ದಾರೆ. ಈ ಮೂಲಕ ಸದ್ಯ ಬೀಸೋ ದೊಣ್ಣೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ಪಾರಾಗಿದ್ದಾರೆ. ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗದಂತೆ ಪ್ಲಾನ್ ಮಾಡಿದ್ದರು ಬೊಮ್ಮಾಯಿ ಎನ್ನಲಾಗಿದೆ.
ಸಿಎಂಗೆ ಇದ್ದ ಭಯವೇನು?
1) ಅಳಿಯನನ್ನ ವರ್ಗಾವಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮೈತ್ರಿ ಸರ್ಕಾರದ ವಿರುದ್ಧವೇ ಬಂಡೆದ್ದು ಮುಂಬೈಗೆ ಹಾರಿದ್ರು.
2) ಬಿಎಸ್ವೈ ಸರ್ಕಾರದಲ್ಲಿ ವರ್ಗಾವಣೆ ಮಾಡಿ ಎಂದು ವಿಶ್ವನಾಥ್ ಬೇಡಿಕೆ ಇಟ್ಟಿದ್ರು.
3) ಸಚಿವ ಸ್ಥಾನ ಕೂಡ ಕೈತಪ್ಪಿರುವುದಕ್ಕೆ ಈಗಾಗಲೇ ಸಾಕಷ್ಟು ಅಸಮಾಧಾನ ಹೊಂದಿದ್ರು.
4) ಸಚಿವ ಸ್ಥಾನ ಬದಲಾಗಿ ಅಳಿಯನ ವರ್ಗಾವಣೆ ಕೆಲಸ ಆಗ್ಲಿಲ್ಲ ಎಂಬ ಅಸಮಾಧಾನವೂ ವಿಶ್ವನಾಥ್ ಅವರಿಗಿತ್ತು.
5) ಹಾಗಾಗಿ ವಿಶ್ವನಾಥ್ ಸರ್ಕಾರ ಹಾಗೂ ಸ್ವಪಕ್ಷದ ವಿರುದ್ಧ ಯಾವಾಗ ಬೇಕಾದರೂ ಸಿಡಿದೇಳುವ ಸಾಧ್ಯತೆ ಇತ್ತು.
6) ಯಡಿಯೂರಪ್ಪ ನಾಯಕತ್ವ ಬದಲಾವಣೆ ವೇಳೆಯೂ ಹಳ್ಳಿಹಕ್ಕಿ ಹೇಳಿಕೆಯಿಂದ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಆಗಿತ್ತು.
7) ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧವೂ ತಿರುಗಿಬಿದ್ದು ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದ ವಿಶ್ವನಾಥ್
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್; ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ED ಸಮನ್ಸ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post