ಸಾವು, ನೋವುಗಳ ಜೊತೆ ಅಟ್ಟಹಾಸದ ಬೀಡಾಗಿರುವ ಅಫ್ಘಾನಿಸ್ತಾನದಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಆದರೆ ಬೇರೆ ದೇಶದವರು ಪಾಡು ಪಟ್ಟಂತೆ ಅಫ್ಘಾನ್ ನಲ್ಲಿರುವ ಭಾರತೀಯರು ಯಾತನೆ ಅನುಭವಿಸಿಲ್ಲ. ಕಾರಣ ಭಾರತೀಯ ಸೈನಿಕರು. ಯಾವುದೆ ತೊಂದರೆ ಇಲ್ಲದೆ, ಸೇಫ್ ಆಗಿ ಭಾರತೀಯರನ್ನು ನಮ್ಮ ಸೇನೆ ವಾಪಸ್ ಕರೆ ತರುತ್ತಿದ್ದಾರೆ. ಆದ್ರೆ ಆ ಕೆಲಸ ಸೇನೆಗೆ ಅಷ್ಟು ಸುಲಭದ ಕೆಲಸವಲ್ಲ.
ಇಂದು ಜಗತ್ತಿನ ದೃಷ್ಟಿ ನೇರವಾಗಿ ತಾಲಿಬಾನ್ ಗಳ ಅಟ್ಟಹಾಸ ಹಾಗೂ ಅಫ್ಘಾನ್ ನಲ್ಲಿರುವ ವಿದೇಶಿಗರ ಮೇಲೆ ಇದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುತ್ತ ಅದೆಷ್ಟೋ ಲಕ್ಷ ಜನ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಗಂಟಲು ಹರಿಯುವ ವರಗೂ ಕಿರುಚುತ್ತಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳ ಸೇನಾ ವಿಮಾನ ಅಲ್ಲಿ ಬಂದು ನೆಲೆಸಿದೆ. ಹಾಗೆ ಹಂತ ಹಂತವಾಗಿ ಜನಗಳನ್ನು ಅಲ್ಲಿಂದ ಹೊತ್ತೊಯ್ಯೂತ್ತಿದ್ದಾರೆ.
ಆದರೆ ಅಲ್ಲಿ ನೆಲೆ ನಿಂತ ಜನರ ಪರಿಸ್ಥಿತಿ ಮಾತ್ರ ಹೇಳ ತೀರದು. ತಿನ್ನಲು ಆಹಾರವಿಲ್ಲ, ಕುಡಿಯಲು ನೀರಿಲ್ಲ.. ಇದೆಲ್ಲ ಹೇಗೋ ಹೊಟ್ಟೆ ಕಟ್ಟಿಕೊಂಡು ಸಹಿಸಿಕೊಂಡಿರುವವರಿಗೆ ಬಾಂಬ್ ದಾಳಿ, ಗುಂಡಿನ ದಾಳಿ ಇನ್ನೊಂದು ಆತಂಕವಾಗಿದೆ.
ಇದೆ ತಾಲಿಬಾನಿಗಳ ನಾಡಲ್ಲಿ ಭಾರತೀಯರು ನೆಲೆಸಿದ್ರೂ.. ಅಲ್ಲಿಂದ ಹೇಗಾದರೂ ಮಾಡಿ ಹೊರಟು ಬಿಡಬೇಕು ಎನ್ನುವುದು ಅವರಲ್ಲೂ ಇತ್ತು. ಆದರೆ ಅಫ್ಘಾನ್ನಲ್ಲಿರುವ ಭಾರತೀಯರ ಪಾಲಿಗೆ ಇರುವ ಭಾರತೀಯ ಸೇನೆ, ಅಲ್ಲಿದ್ದವರಿಗೆ ಹೆಚ್ಚು ಆತಂಕವನ್ನು ಒಡ್ಡಿದೆ.. ತುಂಬ ಸಲೀಸಾಗಿ ಅಚ್ಚು ಕಟ್ಟಾಗಿ ಭಾರತೀಯರನ್ನು ತಮ್ಮ ಜನ್ಮ ನೆಲಕ್ಕೆ ಕರೆದುಕೊಂಡು ಬರ್ತಾ ಇದ್ದಾರೆ. ಅಫ್ಘಾನ್ ನಲ್ಲಿದ್ದ ಬಹುತೇಕ ಭಾರತೀಯರು ಸೇಫ್ ಆಗಿ ಭಾರತಕ್ಕೆ ಮರಳಿದ್ದಾಗಿದೆ.
ಅಫ್ಘಾನ್ನಿಂದ 800 ಜನ ಭಾರತಕ್ಕೆ ವಾಪಸ್
ನೆರೆಯ ನೇಪಾಳದವರನ್ನೂ ಕರೆತಂದ ಭಾರತ
ಇದು ಭಾರತೀಯರು ಹೆಮ್ಮೆ ಪಡುವಂತಹ ವಿಷಯ. ಉಗ್ರರ ಬೀಡಾಗಿರುವ ಅಫ್ಘಾನ್ ನಲ್ಲಿ ಅದೆಷ್ಟೋ ಜನ ಹಿಂಸೆಗೊಳಗಾಗಿ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದರ ಮೇಲೊಂದರಂತೆ ದಾಳಿಗಳೂ ಅಲ್ಲಿ ನೆಲೆಸಿರುವವರು ಪ್ರಾಣ ಗಟ್ಟಿ ಹಿಡುದು ಕೂರುವಂತಾಗಿದೆ. ಬಲಿಷ್ಟ ರಾಷ್ಟ್ರಗಳು ಜನಗಳನ್ನು ವಿಂಗಡಿಸುವಲ್ಲಿ., ಅಲ್ಲಿಂದ ಹೊತ್ತು ಹೋಗುವುದರಲ್ಲಿ ಹರ ಸಾಹಸ ಪಡ್ತಾ ಇದ್ರೆ. ಭಾರತ ಮಾತ್ರ ಹೆಚ್ಚು ಸುದ್ದಿ ಇಲ್ಲದೆ 800 ಭಾರತೀಯರನ್ನು ಕರೆತಂದಿದೆ. ಇದರ ಜೊತೆಗೆ ನೆರೆಯ ರಾಷ್ಟ್ರ ನೇಪಾಳದ ಪ್ರಜೆಗಳನ್ನು ಪರಿಗಣಿಸಿ, ಆ ಪ್ರಜೆಗಳನ್ನು ಅವರ ತಾಯ್ನಾಡಿಗೆ ತಲುಪಿಸುತ್ತದೆ.
ಅಫ್ಘಾನ್ನಲ್ಲಿರುವ ಭಾರತೀಯರಿಗಾಗಿ ಶೋಧ ಕಾರ್ಯ
ಭಾರತೀಯರನ್ನು ಹುಡುಕಿ ತರುವುದು ಅಷ್ಟು ಸುಲಭವಲ್ಲ
ಹಂತ ಹಂತವಾಗಿ ಭಾರತೀಯರನ್ನು ಬರಮಾಡಿಕೊಳ್ಳುತ್ತಿರುವ ಸೇನೆಗೆ ಇನ್ನು ಅದೆಷ್ಟೋ ಭಾರತೀಯರು ಸಿಕ್ಕಿಲ್ಲ. ಉಗ್ರಗಾಮಿಗಳ ಆತಂಕಕ್ಕೋ ಏನೋ.. ಭಾರತೀಯರು ಅಲ್ಲಿಂದ ಹೊರ ಬರಲು ತಿಳಿಯದೆ ಅಲೆದಾಡುತ್ತಿದ್ದಾರೆ. ಅಂತವರಿಗಾಗಿ ಭಾರತೀಯ ಸೇನೆ ಶೋಧ ಕಾರ್ಯ ನೆರೆವೇರಿಸುತ್ತಿದೆ. ಅಷ್ಟು ದಾಳಿಗಳ ನಡುವೆ, ಆ ಕೃರಿಗಳ ನಡುವೆ ಭಾರತೀಯರನ್ನು ಹುಡುಕಿ ತರಲು ಸುಲಭದ ಮಾತಲ್ಲ. ಆದರೆ ಸೇನೆ ಈ ವಿಚಾರವಾಗಿ ಸಾಕಷ್ಟು ಕಾಳಜಿ ವಹಿಸಿ. ಒಬ್ಬೊಬ್ಬರನ್ನು ಶೋಧಿಸಿ ಕರೆ ತರುತ್ತಿದ್ದಾರೆ.
ಸೇನಾ ವಿಮಾನ ಹಾರಾಟ ಮಾರ್ಗದಲ್ಲೂ ತೊಂದರೆ
ಅಫ್ಘಾನ್- ಭಾರತದ ನಡುವೆ ವಿಮಾನ ಹಾರಾಟ ನಿಷೇಧ
ಕಾಬೂಲ್ನಿಂದ ನವ ದೆಹಲಿಗೆ ವಿಮಾನ ಮಾರ್ಗವಾಗಿ ಒಟ್ಟು ಸಾವಿರ ಕಿಲೋ ಮಿಟರ್ ಅಂತರ ಚಲಿಸ ಬೇಕು. ಆದರೆ ಈಗ ಅಲ್ಲಿ ಹಾರಾಡುತ್ತಿರುವ ವಿಮಾನಗಳು ಬರೋಬರಿ 3000 ಕ್ಕೂ ಹೆಚ್ಚು ಕಿಲೋ ಮಿಟರ್ ಮಾರ್ಗದಲ್ಲಿ ಸಂಚರಿಸುತ್ತಿದೆ. ಕಾರಣ ಏನು ಗೊತ್ತಾ ? ಪಾಕಿಸ್ತಾನ. ಹೌದು ಅಫ್ಘಾನ್ ಹಾಗೂ ಭಾರತದ ನಡುವೆ ಇರುವ ದೇಶ ಪಾಕಿಸ್ತಾನ. ಒಪ್ಪಂದದ ಪ್ರಕಾರ ಭಾರತೀಯ ಸೇನಾ ವಿಮಾನಗಳೂ ಪಾಕ್ ಮೇಲೆ ಹಾರಾಡುವ ಹಾಗಿಲ್ಲ. ಈ ಇಕ್ಕಟಿನ ಪರಿಸ್ಥಿತಿಯಲ್ಲೂ ಸಹ ಭಾರತಕ್ಕೆ ಈ ಒಂದು ನಿರ್ಭಂದ ಹೇರಲಾಗಿದೆ. ಪಾಕ್ ಮಾರ್ಗವಾಗಿ ಬರಲು ಸಾಧ್ಯವಾಗದೆ ಭಾರತೀಯ ಸೇನೆ ಮತ್ತೊಂದು ಮಾರ್ಗವನ್ನು ಹುಡುಕಿಕೊಂಡಿದೆ.
ಇರಾಕ್ನಿಂದ ಅರಬ್ಬಿ ಸಮುದ್ರ ದಾಟಿ ಬರುತ್ತಿರುವ ವಿಮಾನಗಳು
ತೆರವು ಕಾರ್ಯಾಚರಣೆ ವಿಳಂಬವಾಗಲೂ ಇದು ಕಾರಣ
ಕಾಬೂಲ್ ನಿಂದ ಸೇನಾ ವಿಮಾನಗಳನ್ನು ಹೊರತು ಪಡಿಸಿ ಬೇರೆ ವಿಮಾನಗಳು ಹಾರಾಡುವಂತಿಲ್ಲ. ಈ ಕಾರಣಕ್ಕಾಗಿ ಪಾಕ್ ಮಾರ್ಗವೂ ಭಾರತೀಯ ಸೇನೆಗೆ ಲಭ್ಯವಿಲ್ಲ. ಇದರಿಂದ ಸೇನಾ ವಿಮಾನಗಳೂ ಕಾಬೂಲ್ನಿಂದ ಇರಾಕ್ ತಲುಪಿ, ಅಲ್ಲಿಂದ ಅರಬ್ಬಿ ಸಮುದ್ರವನ್ನು ದಾಟಿ, ಗುಜಾರತ್ ನಲ್ಲಿ ಬಂದು ಇಳಿಯುತ್ತಿದೆ. ಅಲ್ಲಿಂದ ಮತ್ತೆ ದೆಹಲಿಗೆ ಪಯಣ ಬೆಳಸಿ, ನಿರಾಶ್ರಿತರನ್ನು ಕರೆತರುತ್ತಿದೆ. ಈ ಕಾರಣದಿಂದ ಅಫ್ಘಾನ್ ನಲ್ಲಿರುವ ಭಾರತೀಯರ ತೆರವು ಕಾರ್ಯಚರಣೆ ವಿಳಂಬವಾಗುತ್ತಿದೆ ಅನ್ನುತ್ತಿದ್ದಾರೆ ವಿದೇಶಾಂಗ ಸಚಿವ ಜೈ ಶಂಕರ್.
ಒಟ್ಟಿನಲ್ಲಿ ಭಾರತೀಯರು ಹೊರ ದೇಶಗಳ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಕಾರಣ, ಈ ಕೆಲಸವೂ ಸಲೀಸಾಗಿ ಹೋಗಿದೆ. ಭಾರತೀಯರಾಗಲಿ, ಬೇರೆ ದೇಶದವರಾಗಲಿ ಕಷ್ಟ ಎಂದಾಗ ಸ್ಪಂದಿಸುವುದು ಭಾರತೀಯರು ಮುಂಚಿನಿಂದ ಬೆಳಸಿಕೊಂಡು ಬಂದ ಗುಣ. ಅಫ್ಘಾನ್ ಎಂತ ಪರಿಸ್ಥಿತಿಯಲ್ಲಾದರೂ ಇರಲಿ.. ಆ ನೆಲದಿಂದ ಭಾರತೀಯರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎನ್ನುವ ನಂಬಿಕೆ ಹುಟ್ಟಿಸಿದ್ದಾರೆ ಭಾರತೀಯ ವಾಯು ಸೇನೆ.
ಅಫ್ಘಾನಿಸ್ತಾನ ಎಂತಹ ಪರಿಸ್ಥಿತಿಯಲ್ಲಿದೆ, ಅಲ್ಲಿನ ಆ ಪರಿಸ್ಥಿತಿಗೆ ಕಾರಣವಾದವರೂ ಯಾರು.. ಹಾಗೂ ಭಾರತೀಯ ಸೇನೆ ಅನುಭವಿಸುತ್ತಿರುವ ಕಷ್ಟಗಳೇನು ಎಲ್ಲೂವನ್ನು ನೋಡಿದಿರಿ. ಇದಿಷ್ಟು ಆದಷ್ಟು ಬೇಗ ಸುಧಾರಿಸಲಿ.. ಭಾರತೀಯರಂತೆ ಎಲ್ಲರೂ ಸೇಫ್ ಆಗಿ ಅವರ ನೆಲ ತಲುಪಲಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post