ಒಳ್ಳೆ ಹುಡುಗ ಪ್ರಥಮ್.. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಖತ್ ಆ್ಯಕ್ಟೀವ್ ಆಗಿರ್ತಾರೆ. ಕೆಲವೊಂದು ಪೋಸ್ಟ್ಗಳನ್ನ ಮಾಡುತ್ತ ತಮ್ಮ ಅಭಿಮಾನಿಗಳಿಗೆ ಹತ್ತಿರ ಇರುವ ಪ್ರಯತ್ನವನ್ನ ಮಾಡ್ತಾನೇ ಇರ್ರೆತಾರೆ. ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಪ್ರಥಮ್ ಅವರು ಇಂದು ಮಾಡಿರುವ ಪೋಸ್ಟ್ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅದೇನಪ್ಪ ಅಂದ್ರೆ ಪ್ರಥಮ್ ಅವರು ಡ್ರೋಣ್ ಪ್ರತಾಪ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿ ಮಾಡಿರುವ ಖುಷಿಯಲ್ಲಿರುವ ಪ್ರಥಮ್ ಒಂದಿಷ್ಟು ಫೋಟೋಗಳನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಅಪೂರ್ವ ಸಂಗಮ..!
ಫೋಟೋ ಶೇರ್ ಮಾಡಿ ಬರೆದುಕೊಂಡಿರುವ ಪ್ರಥಮ್, ‘ಪಿಕ್ ಆಫ್ ದ ಈಯರ್.. ಡ್ರೋಣ್ ಪ್ರಥಮ್ ಮೀಟ್ಸ್ ಡ್ರೋಣ್ ಪ್ರತಾಪ್.. ಇನ್ಮೇಲೆ ಇವ್ನು ನನ್ನ ತಮ್ಮ, ಇದೊಂದು ಅಪೂರ್ವ ಸಂಗಮ.. ನನ್ನ ತಮ್ಮ ಸಿಕ್ಕಿಬಿಟ್ಟ! ಡ್ರೋಣ್ ಪ್ರಥಮ್ ಶೂಟ್ ಸ್ಟಾರ್ಟ್ಸ್ ಫ್ರಮ್ ನೆಕ್ಸ್ಟ್ ವೀಕ್ ಅಂತಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಮಾಡ್ತಿದ್ದಂತೆ ಪ್ರಥಮ್ ಅಭಿಮಾನಿಗಳು ಅವರದ್ದೇ ಶೈಲಿಯಲ್ಲಿ ಪೋಸ್ಟ್ಗೆ ಕಮೆಂಟ್ ಮಾಡುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post