ಕೇರಳ: ಚಿನ್ನ ಅಂತ ಅಂದ ತಕ್ಷಣ ಎಲ್ಲಾರೂ ಒಂದ್ಸಲ ಯೋಚ್ನೆ ಮಾಡ್ತಾರೆ, ಇನ್ವೆಸ್ಟ್ಮೆಂಟು.. ಚಿನ್ನ ಮಾಡಿ ಇಟ್ಕೊಂಡ್ರೆ ಮುಂದೆ ನಮಗೆ ಯೂಸ್ ಆಗುತ್ತೆ ಅಂತ ಒಂದಷ್ಟು ಚಿನ್ನವನ್ನ ನಾವು ಮಾಡಿಸಿ ಇಟ್ಕೊಂಡಿರ್ತೀವಿ. ಆದ್ರೆ, ಎಂಥ ಕಾಲ ಬಂತಪ್ಪ ಅಂದ್ರೆ, ಚಿನ್ನವನ್ನ ಪೇಂಟ್ ತರ ಬಳೆದುಕೊಂಡು ಕಳ್ಳ ಸಾಗಾಣೆ ಮಾಡಲು ಚಾಣಾಕ್ಷ್ಯತನವನ್ನ ಮೆರೆಯಲು ಹೋಗಿ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ.
ಕೇರಳದ ಕಣ್ಣೂರು ಏರ್ಪೋರ್ಟ್ನಲ್ಲಿ ಪ್ರಯಾಣಿಕನಿಂದ 302 ಗ್ರಾಂ.. ಅಂದ್ರೆ ಬರೋಬ್ಬರಿ 14 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನವನ್ನು ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಚಿನ್ನವನ್ನ ವಶವಡಿಸಿಕೊಂಡಿದ್ದಾರೆ.
ನೋಡಲು ಹಳದಿ ಬಣ್ಣದ ಪೇಂಟ್ನಂತೆ ಕಾಣುವ ವಸ್ತು. ಆದ್ರೆ ಅದು ಪೈಂಟ್ ಅಲ್ಲ, ಬದಲಾಗಿ ಚಿನ್ನ. ಇದೀಗ, ಜೀನ್ಸ್ ಪ್ಯಾಂಟ್ನ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಜೀನ್ಸ್ ಪ್ಯಾಂಟ್ ಎರಡನೇ ಲೇಯರ್ನಲ್ಲಿ ಹಳದಿ ಬಣ್ಣದಲ್ಲಿ ಚಿನ್ನದ ಪೇಸ್ಟ್ಅನ್ನು ಅಡಗಿಸಿಟ್ಟು, ಕಳ್ಳಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post