ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಅದರಲ್ಲೂ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ನಲ್ಲಿ ಹಿಟ್ಮ್ಯಾನ್ ಶತಕ ಸಿಡಿಸಿ ಮಿಂಚಿದ್ದಾರೆ. ಈಗಾಗಲೇ ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ 15 ಸಾವಿರ ರನ್ ಕಲೆ ಹಾಕಿರೋ ರೋಹಿತ್ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 8ನೇ ಶತಕ ಸಿಡಿಸಿದ ರೋಹಿತ್ ಶರ್ಮಾ
ಕ್ರಿಕೆಟ್ ಲೋಕದಲ್ಲಿ ರೋಹಿತ್ ಶರ್ಮಾ ಹೊಸ ಛಾಪು ಮೂಡಿಸ್ತಿದ್ದಾರೆ. ಅದರಲ್ಲೂ ಆರಂಭಕರಾಗಿ ಯಶಸ್ವಿ ಪ್ರದರ್ಶನ ತೋರುತ್ತಿರೋ ಹಿಟ್ ಮ್ಯಾನ್ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಸದ್ಯ ಇಂಗ್ಲೆಂಡ್ ಓವೆಲ್ನಲ್ಲಿ ನಡೆಯುತ್ತಿರ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಭರ್ಜರಿ ಶತಕ ಸಿಡಿಸಿದ್ದಾರೆ. 256 ಎಸೆತಗಳಲ್ಲಿ 127 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಈವರೆಗೂ 8 ಶತಕ ಬಾರಿಸಿ ಮುನ್ನುಗುತ್ತಿದ್ದಾರೆ.
ಅಂದಹಾಗೇ ಕೇವಲ ಒಂದೇ ಒಂದು ವಾರದಲ್ಲಿ ರೋಹಿತ್ ಶರ್ಮಾ ಹೆಸರಿಗೆ ಹಲವು ದಾಖಲೆಗಳು ಸೇರಿಕೊಂಡಿವೆ. ಅದನ್ನ ಒಂದೊಂದಾಗಿ ತೋರಿಸ್ತೀವಿ ನೋಡಿ..
ಹಿಟ್ಮ್ಯಾನ್ ದಾಖಲೆಗಳು..
- ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ಸಾವಿರ ರನ್ ಪೂರೈಸಿದ ಹಿಟ್ಮ್ಯಾನ್
- ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶತಕ
- ಇಂಗ್ಲೆಂಡ್ ನೆಲದಲ್ಲಿ 3 ಫಾರ್ಮ್ಯಾಟ್ನಲ್ಲಿ ಶತಕ ಬಾಡಿಸಿದ ಮುಂಬೈಕರ್
- ಮೂರು ಮಾದರಿಯಲ್ಲೂ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ
- ಇಂಗ್ಲೆಂಡ್ನಲ್ಲಿ 2 ಸಾವಿರ ರನ್ ಕಲೆ ಹಾಕಿರುವ ರೋಹಿತ್ ಶರ್ಮಾ
- ಟೆಸ್ಟ್ ಕ್ರಿಕೆಟ್ನಲ್ಲಿ 3 ಸಾವಿರ ರನ್ ಬಾರಿಸಿರುವ ಹಿಟ್ ಮ್ಯಾನ್
- ಆರಂಭಿಕ ಆಟಗಾರನಾಗಿ 11 ಸಾವಿರ ರನ್ ಕಲೆ ಹಾಕಿದ ರೋಹಿತ್
- 2021ರ ಸಾಲಿನಲ್ಲಿ 1 ಸಾವಿರ ರನ್ ಹೊಡೆದ ರೋಹಿತ್ ಶರ್ಮಾ.
ಸದ್ಯ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ನಲ್ಲಿ ರೋಹಿತ್ ಶರ್ಮಾ 127 ರನ್ ಕಲೆ ಹಾಕಿದ್ದಾರೆ. ಅದರೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡಿರೋ ಭಾರತ 270 ಎನ್ ಬಾರಿಸಿದೆ. ಸದ್ಯ ಕ್ರೀಜ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಜಡೇಜಾ ಬ್ಯಾಟಿಂಗ್ ಮಾಡ್ತಿದ್ದು, ಅಂದುಕೊಂಡಂತೆಯಾದ್ರೆ ಭಾರತ, ಇಂಗ್ಲೆಂಡ್ಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡುವ ಸಾಧ್ಯತೆಗಳಿವೆ.
That's Stumps on Day 3 at The Oval!#TeamIndia move to 270/3, leading England by 171 runs. @ImRo45 1⃣2⃣7⃣@cheteshwar1 6⃣1⃣
Captain @imVkohli (22*) & @imjadeja (9*) will resume the proceedings tomorrow on Day 4. #ENGvIND
Scorecard 👉 https://t.co/OOZebP60Bk pic.twitter.com/C9yfQNK1vF
— BCCI (@BCCI) September 4, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post