ರಿಯಾಲಿಟಿ ಶೋಗಳ ಮೂಲಕ ಅದೆಷ್ಟೋ ಬಡ ಪ್ರತಿಭೆಗಳು ಬೆಳಕಿಗೆ ಬಂದಿವೆ..ಅದ್ರಲ್ಲೂ ಮುಖ್ಯವಾಗಿ ಸಂಗೀತ ಲೋಕದಲ್ಲಿ ಮಿನುಗುವ ತಾರೆಗಳಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆಯಾದವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಕಲಬುರ್ಗಿಯ ಸೂರ್ಯಕಾಂತ್.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿ ಎಂಬ ಕುಗ್ರಾಮದಿಂದ ಬಂದ ಸೂರ್ಯಕಾಂತ್ಗೆ ಮಾತು ಕೈ ಕೊಟ್ಟರು ಸಂಗೀತ ಕೈಹಿಡಿದಿದೆ.. ಎಸ್ಪಿಬಿ ಅವರ ಪರಂಪರೆಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮಾಡಿರುವ ಇಂಪ್ಯಾಕ್ಟ್ ಅಷ್ಟಿಷ್ಟಲ್ಲ..ಒಂದು ಪುಟ್ಟ ಗ್ರಾಮಕ್ಕೆ ದಾರಿ ದೀಪವಾಗಿದೆ.
ಹೌದು, ಗಡಿಲಿಂಗದಹಳ್ಳಿಗೆ ಎಷ್ಟೋ ವರ್ಷಗಳಿಂದ ಬಸ್ ವ್ಯವಸ್ಥೆನೇ ಇರಲಿಲ್ಲ. ಈ ಕುರಿತು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಸೂರ್ಯಕಾಂತ್ ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಕಾರ್ಯಪ್ರವತ್ತರಾಗಿ ಚಿಂಚೋಳಿಯಿಂದ ಗಡಿಲಿಂಗದಹಳ್ಳಿಗೆ ಬಸ್ ಸೇವೆ ಕಲ್ಪಿಸಿದ್ದಾರೆ.
ಸವಾಲುಗಳ ಸರಮಾಲೆಯಲ್ಲಿಯೂ ಕೂಡ ತಮ್ಮ ಅದ್ಭುತವಾದ ಗಾಯನದ ಮೂಲಕ ಸರ್ಕಾರದವರೆಗೂ ಮುಟ್ಟಿರುವ ಸೂರ್ಯಕಾಂತ್ ಎಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗಿ ಬೆಳೆಯುತ್ತಿದ್ದು, ಅವರ ಗಾನ ಸುಧೆ ಹೀಗೆ ಮುಂದುವರೆಯಲಿ.. ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post