ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಮಾಡಿರೋ ಇಂಪ್ಯಾಕ್ಟ್ ಅಷ್ಟಿಷ್ಟಲ್ಲ. ಶಿಕ್ಷಣದ ಬಗ್ಗೆ ಇರಬಹುದು, ಜಾತಿ ವ್ಯವಸ್ಥೆ ಬಗ್ಗೆ ಇರಬಹುದು ಈ ಧಾರಾವಾಹಿ ಚೆಲ್ಲಿರೋ ಬೆಳಕು ಮೆಚ್ಚುಗೆಗೆ ಅರ್ಹ.
ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಕನ್ನಡದಲ್ಲಿ 200 ಎಪಿಸೋಡ್ಗಳನ್ನ ಪೂರೈಸಿ ಭರ್ಜರಿಯಾಗಿ ಸಾಗುತ್ತಿದೆ.
ಅಂದ್ಹಾಗೇ, ಅಂಬೇಡ್ಕರ್ ಪ್ರೌಢಾವಸ್ಥೆಯ ಕಥೆ ಶುರುವಾಗಿದ್ದು, ಪ್ರೌಢಾವಸ್ಥೆಯ ಅಂಬೇಡ್ಕರ್ ಪಾತ್ರ ಮಾಡ್ತಿರೋದು ನಟ ಅಥರ್ವ ಕಾರ್ವೆ. ಹೊಸ ಟ್ವಿಸ್ಟ್ಗಳೊಂದಿಗೆ ಕಥೆ ತುಂಬಾ ಚೆನ್ನಾಗಿ ಸಾಗುತ್ತಿದ್ದು, ಜನರ ಅಚ್ಚು ಮೆಚ್ಚಿನ ಸೀರಿಯಲ್ ಆಗಿದೆ.
ಇದನ್ನೂ ಓದಿ:ಜೀ ಕುಟುಂಬಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್
ಈ ಧಾರಾವಾಹಿಯಲ್ಲಿ ಬಾಲ ಭೀಮನ ಪಾತ್ರ ಮಾಡಿರೋ ಬಾಲಾನಟ ಆಯುಧ್‌ನ ಅಭಿನಯವನ್ನ ಇಡೀ ದೇಶವೇ ಮೆಚ್ಚಿದೆ. ಈ ಧಾರಾವಾಹಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯೋಕೆ ಕಾರಣವೇ ಆಯುಧ್ ನಟನೆ. ಮರಾಠಿ ಭಾಷೆಯಲ್ಲಿ ಚಿರಪರಿಚಿತರಾಗಿರುವ ಅಥರ್ವ. ಈ ಹಿಂದೇ ಕೂಡ ಕೆಲವು ಹಿಂದಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post