ಕ್ರೀಡಾಲೋಕದ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಇನ್ಮುಂದೆ ಕ್ಯಾಪ್ಟನ್ ಆಗಿ ಮುಂದುವರೆಯದಿರಲು ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಈ ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: #BIG BREAKING ಟಿ20 ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ವಿರಾಟ್ ಕೊಹ್ಲಿ
ಈ ಮಧ್ಯೆ ಕ್ರಿಕೆಟ್ ಕಮೆಂಟೇಟರ್, ಮತ್ತು ವಿಮರ್ಶಕ ಹರ್ಷ ಭೋಗ್ಲೆ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಅವರು ಮೊದಲಿಗೆ ಆರ್ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯಲಿದ್ದಾರೆ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯಲು ಕೊಹ್ಲಿ ನಿರ್ಧಾರ.. ಅಭಿಮಾನಿಗಳ ಹೃದಯ ಚೂರು
ವಿರಾಟ್ರ ತೀವ್ರತೆ ದೊಡ್ಡದು. ಅವರು ಮೊದಲಿಗೆ ಆರ್ಸಿಬಿಯ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂದುಕೊಂಡಿದ್ದೆ. ಬಹುಶಃ ಈ ನಿರ್ಧಾರ ಕೊಹ್ಲಿ ಅವರಿಗೆ ರೆಸ್ಟ್ ನೀಡಬಹುದು.. ಈ ಮೂಲಕ ಟಿ 20 ಬ್ಯಾಟ್ಸ್ಮನ್ ಆಗಿ ಮತ್ತೊಂದು ಎತ್ತರಕ್ಕೆ ಏರಬಹುದು.. ಯಾರಿಗೆ ಗೊತ್ತು ಎಂದಿದ್ದಾರೆ.
Virat's intensity was insane. I had thought he would give up the captaincy of #RCB which would give him two months off as leader. Hopefully this can give his mind the rest it needs and who knows, find him another peak as a T20 batsman.
— Harsha Bhogle (@bhogleharsha) September 16, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post