ಬೆಂಗಳೂರು: ವ್ಯಕ್ತಿಯೋರ್ವ ಬುರ್ಖಾ ಧರಿಸಿದ್ದ ಮಹಿಳೆಯನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೋಗುವ ವೇಳೆ ಅನ್ಯಕೋಮಿನ ಯುವಕರು ಬೈಕ್ ತಡೆದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಡೈರಿ ಸರ್ಕಲ್ ಬಳಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ. ಬೈಕ್ ತಡೆದ ಅನ್ಯಕೋಮಿನ ಯುವಕರು ಮಹಿಳೆಯನ್ನ.. ಅನ್ಯಧರ್ಮೀಯ ವ್ಯಕ್ತಿ ಜೊತೆ ಹೋಗಲು ನಾಚಿಕೆ ಆಗಲ್ವಾ..? ಬೇಕಿದ್ರೆ ಬುರ್ಖ ತೆಗೆದು ಹೋಗು ಎಂದು ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿಡಿಯೋ ವೈರಲ್ ಆದ 12 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ದುಗುಂಟೆ ಪೊಲೀಸರು ಘಟನಾ ಸ್ಥಳ ಹಾಗೂ ಬಾತ್ಮೀದಾರರ ಮಾಹಿತಿಯಿನ್ನು ಅನುಸರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post