ಬೆಂಗಳೂರು: ಇಕ್ಬಾಲ್ ಅನ್ಸಾರಿ ಮೇಲೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಗರಂ ಆಗಿದ್ದು ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ. ಕೊಪ್ಪಳದಲ್ಲಿ ನೀವು ಎಷ್ಟು ಕೊನೆಯಲ್ಲಿದ್ದಿರಿ? ಕಾಂಗ್ರೆಸ್’ನಲ್ಲಿ ನಿಮ್ಮ ಸ್ಥಾನ ಎಷ್ಟು ಕೊನೆಯಲ್ಲಿತ್ತು ಎನ್ನುವುದು ನಿಮಗಿಂತ ಕೊಪ್ಪಳದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಧರ್ಮಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ? ಅವತ್ತು ಡಿಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀಕರಿಸಲಿಲ್ಲ? 3/4
— Sharavana TA (@SharavanaTa) October 17, 2021
ಧರ್ಮಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ, ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ, ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ? ಅವತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀಕರಿಸಲಿಲ್ಲ? ಜೆಡಿಎಸ್ ಅಭ್ಯರ್ಥಿ ಆಗಿದ್ದಾಗ ಎರಡು ಸಲ ಗೆದ್ದಿರಿ. ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಅಭ್ಯರ್ಥಿ ಆದಾಗ ಮಕಾಡೆ ಮಲಗಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ.1/2
— Sharavana TA (@SharavanaTa) October 17, 2021
ಗಂಗಾವತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏದುಸಿರು ಬಿಡುತ್ತಿದ್ದ ನೀವು ದಡ ಸೇರಲು ಇದೇ ಕುಮಾರಸ್ವಾಮಿ ಅವರ ನೆರವು ಬೇಕಾಯಿತು. ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ ಎಂಬ ಗಾದೆ ಮಾತಿನಂತೆ ಇದೆ ನಿಮ್ಮ ವರಸೆ ಎಂದು ಟಿ.ಎ.ಶರವಣ ಗುಡುಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post