ಚಿಕ್ಕಬಳ್ಳಾಪುರ: ಕುರಿ ತೊಳೆಯಲು ಹೋಗಿ ಮೂವರು ಯುವಕರು ನೀರು ಪಾಲಾದ ದುರ್ಘಟನೆ ಜಿಲ್ಲೆಯ ಕೊಡದವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಬಚ್ಚವಾರಹಳ್ಳಿ ಗ್ರಾಮದ ಸತೀಶ್ (17), ಕೊಡದವಾಡಿಯ ಸೋದನ್(16) ಮತ್ತು ಸುದರ್ಶನ್ (17) ಸಾವನ್ನಪ್ಪಿದ ದುರ್ದೈವಿಗಳು. ಚಿಂತಾಮಣಿ ತಾಲೂಕಿನ ಕೊಡದವಾಡಿ ಕೆರೆ ಸತತ ಮಳೆಯಿಂದ ಭರ್ತಿ ತುಂಬಿದ್ದು ತುಂಬಿದ ಕೆರೆಯಲ್ಲಿ ಕುರಿಗಳನ್ನು ತೊಳೆಯುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಮೂವರ ಶವ ಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post