ಬೆಳಗಾವಿ: ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವಿನ ಸುದ್ದಿ ಕೇಳಿ ಅಭಿಮಾನಿ ಓರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಸಿಂದೊಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಪರಶುರಾಮ ದೇಮಣ್ಣವರ(33)ಸಾವನ್ನಪ್ಪಿದ ಅಭಿಮಾನಿ. ಇಂದು ಬೆಳಗ್ಗೆ ಟಿವಿ ನೋಡುತ್ತ ಕುಳಿತ್ತಿದ್ದಾಗ ಅಭಿಮಾನಿ ಪರಶುರಾಮ ಕಣ್ಣೀರು ಹಾಕಿದ್ದಾನೆ. ಆ ಬಳಿಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ ಅಂತಾ ವರದಿಯಾಗಿದೆ.
ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಪರಶುರಾಮ ಪುನೀತ್ ರಾಜ್‍ಕುಮಾರ್ ಎಲ್ಲಾ ಚಿತ್ರವನ್ನೂ ನೋಡಿದ್ದರು. ಬಾಲ್ಯದಿಂದಲೂ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ. ಅಪ್ಪು ಅಭಿಮಾನಿಯ ಸಾವಿಗೆ ಆತನ ಸ್ನೇಹಿತರು, ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post