ಬೆಂಗಳೂರು: ನಮಗೆ ಮಾತ್ರ ಅಲ್ಲ ಇಡೀ ಕನ್ನಡ ಚಿತ್ರರಂಗಕ್ಕೆ ಇದುಬಹುದೊಡ್ಡ ಶಾಕಿಂಗ್ ನ್ಯೂಸ್, ಬಹುದೊಡ್ಡ ನಷ್ಟ. ಪುನೀತ್ ಇನ್ನಿಲ್ಲ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಇಲ್ವಾ ಎಂದರೇ ಅರ್ಥನೇ ಆಗ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಕಣ್ಣೀರಿಟ್ಟಿದ್ದಾರೆ.
ನ್ಯೂಸ್ಫಸ್ಟ್ನೊಂದಿಗೆ ಮಾತನಾಡಿದ ಸುಮಲತಾ ಅವರು, ನಿನ್ನೆವರೆಗೂ ಎಲ್ಲ ಕಡೆ ಓಡಾಡಿಕೊಂಡಿದ್ದ ಅವರು ಈಗ ಇಲ್ಲ ಎಂದರೇ ಹೇಗೆ ನಂಬಬೇಕು. ನಿನ್ನೆ ನಿನ್ನೆ ಭಜರಂಗಿ ಸಿನಿಮಾ ಪ್ರಮೋಷನ್ನಲ್ಲಿ ಯಶ್, ಶಿವರಾಜ್ಕುಮಾರ್ ಜೊತೆ ಡ್ಯಾನ್ಸ್ ಮಾಡಿದನ್ನು ನೋಡಿದ್ದೆ. ಮೊದ ಮೊದಲು ರಾಜ್ಕುಮಾರ್ ಅವರೊಂದಿಗೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದೆ. ಆಗ ಪಾರ್ವತಮ್ಮ ಅವರೊಂದಿಗೆ 4 ವರ್ಷದ ಪುನೀತ್ ಶೂಟಿಂಗ್ಗೆ ಬರುತ್ತಿದ್ದ. ಆಗ ನನ್ನೊಂದಿಗೆ ತುಂಬಾ ಆತ್ಮೀಯನಾಗಿದ್ದ, ಶೂಟಿಂಗ್ ಸೆಟ್ನಲ್ಲಿ ಕಣ್ಣಮುಚ್ಚಾಲೇ ಆಡೋದು, ಆಟ ಆಡೋದು ಎಲ್ಲವನ್ನು ಮಾಡುತ್ತಿದ್ದೇವು. ಆಗ ಮನೆಗೆ ಹೋಗಿ ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಅಂತಾ ಅತ್ತು ಹಠ ಮಾಡಿದ್ದರಂತೆ. ಇದನ್ನು ರಾಜ್ಕುಮಾರ್ ಅವರೇ ನನಗೆ ಹೇಳಿದ್ರು.. ಅಂತಾ ಕಣ್ನೀರಿಟ್ಟರು.
ಯಾವತ್ತು ಒಂದು ಬಾರಿಯೂ ಆರೋಗ್ಯ ಸರಿ ಇಲ್ಲ ಅಂತಾ ಶೂಟಿಂಗ್ ಕ್ಯಾನ್ಸಲ್ ಮಾಡಿರಲಿಲ್ಲ. ಅವರು ನಡೆದುಕೊಳ್ಳೋ ರೀತಿ ನೋಡಿದ್ರೆ ಎಲ್ಲರಿಗೂ ಈತ ನಮ್ಮಮನೆ ಹುಡುಗ ಅನ್ನಿಸುತ್ತಿತ್ತು. ಈಗ ಆತ ಇಲ್ಲ ಎಂದರೇ ಹೇಗೆ ಅರಗಿಸಿಕೊಳ್ಳೋದು ಅನ್ನೋದು ಗೊತ್ತಾಗುತ್ತಿಲ್ಲ. ಪಾರ್ವತಮ್ಮ ಅವರಿಗೆ ಪುನೀತ್ ರಾಜ್ಕುಮಾರ್ ಎಂದರೇ ಎಲ್ಲರಿಗಿಂತ ಸ್ವಲ್ಪ ಪ್ರೀತಿ ಜಾಸ್ತಿ ಇತ್ತು. ಒಬ್ಬ ದೊಡ್ಡ ನಟನ ಮಗ ಸ್ಟಾರ್ ಆಗಬೇಕು ಅನ್ನೋದು ಸುಲಭ ಅಲ್ಲ.. ದೊಡ್ಮನೆ ಸಿನಿಮಾದಲ್ಲಿ ಅಂಬರೀಶ್, ನಾನು ಒಟ್ಟಿಗೆ ಪುನೀತ್ ಅವರೊಂದಿಗೆ ನಟಿಸಿದ್ದೆವು. ಅಂಬರೀಶ್ ತುಂಬಾನೇ ಪುನೀತ್ ಅವರನ್ನು ಕಾಲೆಳೆಯುತ್ತಿದ್ದರು.. ಆದ್ರೆ ಪುನೀತ್ ಅಂಬರೀಶ್ ಮಾವ ಅಂತಾ ಪ್ರೀತಿ ಇಂದ ಮಾತನಾಡೋದು ಮಾಡುತ್ತಿದ್ದರು. ಈ ಎಲ್ಲ ನೆನಪುಗಳು ನಮ್ಮೊಂದಿಗೆ ಇದೆ. ಆದರೆ ಪುನೀತ್ ಅವರು ಇಲ್ಲ ಅನ್ನೋದು ಇಡೀ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ನಮ್ಮ ಅಪ್ಪು, ನಮ್ಮ ಅಪ್ಪು ಇಲ್ಲ ಅನ್ನೋದು ಊಹೆ ಮಾಡ್ಕೊಳ್ಳೋಕೆ ಆಗ್ತಿಲ್ಲ ಎಂದು ಭಾವುಕರಾದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post