ಚಿತ್ರದುರ್ಗ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹಿರಿಯೂರು ವಿಭಾಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.
ಬೆಸ್ಕಾಂ ಟೆಂಡರ್ ನಲ್ಲಿ ಬರೋಬ್ಬರಿ 57 ಕೋಟಿ ರೂಪಾಯಿ ಗೋಲ್ಮಾಲ್ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಕಮಿಷನ್ ಆಸೆಗೆ ಖಾಸಗಿ ಕಂಪನಿಗೆ ಟೆಂಡರ್ ಹಚದಚು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ ಎನ್ನಲಾಗಿದೆ.
10 ಕೋಟೆ ವೆಚ್ಚದಲ್ಲಿ ಆಗುವ ಇಲಾಖೆಯ ಕೆಲಸಕ್ಕೆ ಹೆಚ್ಚುವರಿ 18 ಕೋಟಿ ರೂಪಾಯಿ ನೀಡಿ ಬೆಂಗಳೂರು ಮೂಲದ ಆರ್.ಕೆ ಅಸೋಸಿಯೇಟ್ಸ್ ಎಂಬ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಡಿಮೆ ವೆಚ್ಚದಲ್ಲಿ ಸ್ಥಳೀಯ ಗುತ್ತಿಗೆದಾರರು ಟೆಂಡರ್ ಕೇಳಿದರೂ ನೀಡದ ಬೆಸ್ಕಾಂ ಹೆಚ್ಚುವರಿಯಾಗಿ ಟೆಂಡರ್ ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹೊರೆ ಮಾಡಿದೆ ಎಂದು ಸ್ಥಳೀಯ ಗುತ್ತಿಗೆದಾರು ಆರೋಪಿಸಲಾಗಿದೆ.
ಜೊತೆಗೆ 5 ಲಕ್ಷದೊಳಗಿನ ಟೆಂಡರ್ಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂಬ ಸರ್ಕಾರದ ಆದೇಶವಿದ್ದರು ಕೂಡ ನಿಯಮಗಳನ್ನು ಉಲ್ಲಂಘಿಸಿ ಹೊರಗಿನವರಿಗೆ ಟೆಂಡರ್ ನೀಡಲಾಗಿದೆ ಎಂದು ಹಿರಿಯೂರು ಸ್ಥಳೀಯ ಗುತ್ತಿಗೆದಾರು ಆರೋಪಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post