ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ಗೆ ಐಟಿ ಇಲಾಖೆ ಶಾಕ್ ನೀಡಿದ್ದು, ಅವರಿಗೆ ಸಂಬಂಧಪಟ್ಟ ಸುಮಾರು ಒಂದು ಸಾವಿರದ 400 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಕಳೆದ ತಿಂಗಳು ಅಜಿತ್ ಕುಟಂಬಸ್ಥರ ಮನೆಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಅಕ್ರಮ ಆಸ್ತಿ ಅಲ್ಲವೆಂದು ಸಾಬೀತು ಪಡಿಸಲು 90 ದಿನಗಳ ಕಾಲಾವಕಾಶ ನೀಡಿತ್ತು. ಈ ನಡುವೆ ಇಂದು ಡಿಸಿಎಂ ಅಜಿತ್ ಪವಾರ್ಗೆ ಒಡೆತನದ ಸಾತಾರ ನಗರದಲ್ಲಿರುವ 600 ಕೋಟಿ ಮೌಲ್ಯದ ಸಕ್ಕರೆ ಕಾರ್ಖಾನೆ, ಗೋವಾದ ನಿಲಯ ಎಂಬ ಹೆಸರಿನ ರೆಸಾರ್ಟ್ ಮುಂಬೈ ಕಚೇರಿ ಮತ್ತು ದೆಹಲಿಯ ಫ್ಲಾಟ್ಗಳನ್ನ ಜಪ್ತಿ ಮಾಡಲಾಗಿದೆ.
ಒಟ್ಟು 1400 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post