ಬೆಂಗಳೂರು: ಪುನೀತ್ ಅಕಾಲಿಕ ನಿಧನದಿಂದ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಇದು ದೊಡ್ಮನೆ ಕುಟುಂಬಕ್ಕೆ ಭಾರೀ ನೋವು ತಂದಿದ್ದು ಅಪ್ಪು ಪತ್ನಿ ಮತ್ತು ಮಕ್ಕಳು ಸಾಕಷ್ಟು ನೊಂದುಕೊಂಡಿದ್ದಾರೆ.
ಅಪ್ಪುವಿನ ಅಗಲಿಕೆಯಿಂದ ಈಗಾಗಲೇ ನೋವಿನಲ್ಲಿದ್ದೀವಿ, ದಯವಿಟ್ಟು ಮತ್ತೆ ನಮಗೆ ನೋವು ಕೊಡಬೇಡಿ. ಪತಿಯಲ್ಲದೆ ಪತ್ನಿ ಅಶ್ವಿನಿ, ಅಪ್ಪನಿಲ್ಲದೆ ಮಕ್ಕಳು ತುಂಬಾ ನೋವಿನಲ್ಲಿದ್ದಾರೆ. ಆದರೆ ಅಭಿಮಾನಿಗಳ ಆತ್ಮಹತ್ಯೆಗೆ ನನ್ನ ಯಜಮಾನ ಕಾರಣರಾಗುತ್ತಿದ್ದಾರೆ ಎಂದು ಅವರು ತುಂಬ ನೋವಿನಲ್ಲಿದ್ದಾರೆ ಎಂದು ರಾಘಣ್ಣ ಹೇಳಿದ್ದಾರೆ.
ಅಭಿಮಾನಿಗಳ ಸಾವಿನ ಸುದ್ದಿಗಳನ್ನು ಟಿವಿಯಲ್ಲಿ ನೋಡ್ತಿದ್ದಾಗೆ ನಮಗೆ ತುಂಬಾ ನೋವಾಗ್ತಿದೆ.ಇದರಿಂದ ನೊಂದುಕೊಂಡ ಅಪ್ಪು ಪತ್ಮಿ ನಾನು ಹೊರಗಡೆ ಬರಲ್ಲ ಅಂತಿದ್ದಾರೆ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ ಯಾರೂ ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ರಾಘಣ್ಣ ಮನವಿ ಮಾಡಿಕೊಂಡಿದ್ದಾರೆ.
ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್ಫಸ್ಟ್ ಗೀತ ನಮನ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post