ಇಂಡಿಯನ್ ಸಿನಿಮಾ ರಂಗದ ಡ್ಯಾನ್ಸ್ ಕಿಂಗ್, ಸ್ಯಾಂಡಲ್ವುಡ್ ರಂಗ ಡ್ಯಾನ್ಸ್ ಅಣ್ಣಾಬಾಂಡ್ ಒಂದೇ ಸ್ಕ್ರೀನ್ ಮೇಲೆ ಒಂದೇ ಸಿನಿಮಾದ ಮೂಲಕ ಕಾಣಿಸಿಕೊಳ್ತಾರೆ. ಕುಣಿದು ಕುಪ್ಪಳಿಸಿ ಅಭಿಮಾನಿಗಳನ್ನ ರಂಜನೆಯ ಲೋಕದಲ್ಲಿ ತೇಲಾಡಿಸುತ್ತಾರೆ ಅಂತ ನಾವು ನಿಮಗೆ ಸೆಪ್ಟೆಂಬರ್ ತಿಂಗಳ 15ನೇ ತಾರೀಖ್ ಹೇಳಿದ್ವಿ.. ಇನ್ನೇನು ಆ ಹಾಡನ್ನ ಸಿನಿಮಾದ ಮೂಲಕ ನೋಡ ಬೇಕು ಅನ್ನೋಷ್ಟರಲ್ಲಿ ನಮ್ಮ ನಾಡಿನ ಬೆಟ್ಟದ ಹೂವು ಭಗವಂತನ ಪಾದ ಸೇರಿದೆ.
ಒಂದೇ ತೇರೆಯ ಮೇಲೆ ಎರಡು ಮಿನುಗೋ ನಕ್ಷತ್ರಗಳು ಕಂಡು ಕಂಗೋಳಿಸಿದ್ರೆ ಹೆಂಗ್ ಆಗಬೇಡ ಚಿತ್ರಪ್ರೇಮಿಗಳಿಗೆ.. ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್; ಈ ಇಬ್ಬರು ನಾಟ್ಯ ನಟರಾಜನ ಫೇವರೆಟ್ ಭಕ್ತರಿದಂಗೆ.. ಇಬ್ಬರು ಸೇರಿ ಕುಣಿದ್ರೆ ನಟರಾಜ ಧರೆಗಿಳಿದು ದರ್ಶನ ಕೊಟ್ರು ಕೊಡಬಹುದು, ಇಬ್ಬರ ಕುಣಿತವನ್ನ ನೋಡಿ ಪ್ರೇಕ್ಷಕ ಪ್ರಭು ಪ್ರಸನ್ನನಾಗಬಹುದು.. ಅಭಿಮಾನಿಗಳ ಆಸೆ ಪಟ್ಟಂಗೆ ಕನಸು ಕಂಡಂಗೆ ಎಲ್ಲವೂ ಆಗಿತ್ರಿ.. ಪುನೀತ್ ಮತ್ತು ಪ್ರಭುದೇವ ಒಟ್ಟಿಗೆ ಸ್ಟೆಪ್ಸ್ ಹಾಕಿದ್ದರು.. ಆದ್ರೆ ಈ ವೈಭವನ್ನ ನೀಡಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಒಟ್ಟಿಗೆ ತನ್ನ ಫರ್ಫಾರ್ಮೆನ್ಸ್ ನೋಡ ಮೊದ್ಲೇ ಪುನೀತ್ ರಾಜ್ ಕುಮಾರ್ ಅನ್ನೋ ಧ್ರುವ ತಾರೆ ಮರೆಯಾಗಿದೆ..
ನೋಡಿ ನೋಡಿ ಎಷ್ಟು ಅದ್ಭುತವಾಗಿದೆ ; ಅಪ್ಪು ಮತ್ತು ಪ್ರಭುದೇವ ಕುಣಿದಿರೋ ವಿಡಿಯೋ.. ಇದು ಸಿನಿಮಾ ಸೆಟ್ನಲ್ಲಿ ವೈರಲಾಗಿರೋ ವಿಡಿಯೋ.. ಆದ್ರೆ ಇದೇನಾದ್ರು ಬಿಗ್ ಸ್ಕ್ರೀನ್ನಲ್ಲೇ ನೋಡಿದ್ರೆ ಪವರ್ ಫ್ಯಾನ್ಸ್ ಎಷ್ಟು ಸಂತೋಷ ಪಡ್ತಾರೆ ಹೇಳಿ.. ಈ ವೈಭವನ್ನ ನೋಡೋ ಮೊದ್ಲೇ ಬೆಟ್ಟದ ಹೂವ ಭಗವಂತ ಪಾದ ಸೇರಿದೆ.. ದೇವರಿಗೆ ಧಯೆ ಇಲ್ಲ , ಸಾವೆದುರು ಜಯವಿಲ್ಲ..
ಇಂಡಿಯನ್ ಡ್ಯಾನ್ಸ್ ಲೋಕಕ್ಕೆ ಒಂದು ಸಂಚಲನ ಹೊಸ ಸಂಕ್ರಮಣ ಪ್ರಭುದೇವ.. ಗುರುವನ್ನ ಶಿಷ್ಯ ಮೀರಿಸ ಬೇಕು , ತಂದೆಯನ್ನ ಮಗ ಮೀರಿಸ ಬೇಕು ಅಂತಾರೆ.. ಪ್ರಭುದೇವ ಡ್ಯಾನ್ಸ್ ವಿಚಾರದಲ್ಲಿ ತಂದೆ ಮತ್ತು ಗುರು ಇಬ್ಬರನ್ನ ಮೀರಿಸಿ ಬೆಳೆದ ಸಾಧಕ..
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.. ಬಾಲ್ಯದಲ್ಲೇ ಕನ್ನಡ ಚಿತ್ರರಂಗ ಬೆಟ್ಟದ ಹೂವಾಗಿ ರಾಷ್ಟ್ರ ಪ್ರಶಸ್ತಿಯನ್ನ ಪಡೆದ ಪ್ರತಿಭೆ.. ಅಪ್ಪು ಅವರ ಡ್ಯಾನ್ಸ್ ಮತ್ತು ಫೈಟ್ಸ್ಗೆ ಕನ್ನಡದಲ್ಲಿ ಅಪ್ಪುಗೆ ಅಪ್ಪುನೇ ಸರಿಸಾಟಿ.. ಸ್ಯಾಂಡಲ್ವುಡ್ ಕುಣಿತಕ್ಕೆ ಕಾಗುಣಿತವಿದಂಗೆ ಅಪ್ಪು..
ಈ ಅಪ್ಪು ಮತ್ತು ಪ್ರಭುದೇವ ಒಂದು ಬಾರಿ ಆದ್ರು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಇಬ್ಬರು ಒಂದೇ ಹಾಡಿಗೆ ಕುಣಿದು ಕುಪ್ಪಳಿಸ ಬೇಕು ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಕನಸಿನ ಆಸೆಯಾಗಿತ್ತು.. ಕೊನೆಗೂ ಕೋಟಿ ಕನ್ನಡಿಗರ ಆ ಆಸೆಯ ಕನಸು ಈಗ ಈಡೇರಿದೆ.. ಲಕ್ಕಿ ಮ್ಯಾನ್ ಅನ್ನೋ ಸಿನಿಮಾದಲ್ಲಿ ಇಂಡಿಯದ ಡ್ಯಾನ್ಸ್ ಕಿಂಗ್ ಜೊತೆ ಸ್ಯಾಂಡಲ್ವುಡ್ ಡ್ಯಾನ್ಸ್ ಕಿಂಗ್ ಕುಣಿದಿದ್ದಾರೆ..
ಈ ಹಿಂದೆ ಕನ್ನಡ ಕೋಟ್ಯಾದಿಪತಿಯಲ್ಲಿ ಅಪ್ಪು ಮತ್ತು ಪ್ರಭುದೇವ ಚಿಕ್ಕದಾಗಿ ಕುಣಿದಿದ್ರು.. ಅದು ರಿಯಾಲಿಟಿ ಶೋ ಆದ್ರೆ ಇದು ಸಿನಿಮಾ.. ‘ಚಿತ್ರ’, ‘ಮನಸೆಲ್ಲ ನೀನೇ’ ಖ್ಯಾತಿಯ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್ ಮಾಡಿರೋ ಸಿನಿಮಾದಲ್ಲಿ ಪ್ರಭುದೇವ ಜೊತೆ ಅಪ್ಪು ಡ್ಯಾನ್ಸ್ ಮಾಡ್ತಿದ್ದಾರೆ.. ನಟ ಕಮ್ ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಫಸ್ಟ್ ಟೈಮ್ ಡೈರೆಕ್ಷನ್ ಮಾಡ್ತಿದ್ದಾರೆ.. ಅಂದು ಅಪ್ಪು ಮತ್ತು ಪ್ರಭುದೇವ ಮಾಸ್ಟರ್ ಕುಣಿದಿದ್ದ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ..
ಕನ್ನಡಿಗರ ಪಾಲಿಗೆ ಡ್ಯಾನ್ಸ್ ಅಂದ್ರೆ ಅಪ್ಪು , ಅಪ್ಪು ಅಂದ್ರೆ ಡ್ಯಾನ್ಸ್.. ಫೈಟಿಂಗ್ ದೃಶ್ಯಗಳಿಗಂತು ಅಪ್ಪು ಅವರೇ ಅಣ್ಣಾ ಬಾಂಡು.. ಈ ನಂಬಿಕೆ ಅಭಿಮಾನ ನಮ್ಮವರಿಗೆ.. ಆದ್ರೆ ಪಕ್ಕದ ಇಂಡಸ್ಟ್ರಿಯ ಮಂದಿ ಅಪ್ಪು ಅವರ ಡ್ಯಾನ್ಸ್ ಮತ್ತು ಫೈಟಿಂಗ್ಸ್ ಬಗ್ಗೆ ಹೇಳ್ತಿದ್ದೇನು ಅನ್ನೋದೆ ವಿಶೇಷ.. ನಿಮಗೆಲ್ಲ ಜಾನಿ ಮಾಸ್ಟರ್ ಗೊತ್ತಿರ ಬೇಕಲ್ಲ.. ಅದೇ ಅಪ್ಪು ಡ್ಯಾನ್ಸ್ ಹಾಡಿಗೆ ಕುಣಿತದ ಕಾಗುಣಿತವನ್ನ ಪೋಣಿಸಿದ ಕೊರಿಯೋಗ್ರಫರ್.. ಜಾನಿ ಮಾಸ್ಟರ್ ‘‘ರಾಜಕುಮಾರ’’ ಸಿನಿಮಾದ ಸಕ್ಸಸ್ ಸಂಭ್ರಮದ ಇವೆಂಟ್ನಲ್ಲಿ ಒಂದು ಮಾತು ಹೇಳಿದ್ರು.. ರಾಮ್ ಚರಣ್ , ಜೂನಿಯರ್ ಎನ್.ಟಿ.ಆರ್ , ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಅವರನ್ನ ಮಿಕ್ಸ್ ಮಾಡಿದ್ರೆ ಆಗೋದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ..
ಇನ್ನು ಟಾಲಿವುಡ್ ಸಿಮೇಯಲ್ಲಿ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್ ಮತ್ತು ಫೈಟ್ಸ್ಗೆ ಹೆಸರುವಾಸಿ.. ಇಂತಹ ಆರ್ಯ ಖ್ಯಾತಿಯ ಅಲ್ಲು ಅರ್ಜುನ್ ಅಪ್ಪು ಅವರ ಜಾಕಿ ಸಿನಿಮಾದ ತೆಲುಗು ಪ್ರೇಸ್ ಮೀಟ್ನಲ್ಲಿ ಒಂದು ಮಾತನ್ನ ಹೇಳಿದ್ರು ಕೇಳಿ..
ಅಲ್ಲು ಅರ್ಜುನ್ ಅವರಂತೆ ಜೂನಿಯರ್ ಎನ್.ಟಿ.ಆರ್ , ಪವನ್ ಕಲ್ಯಾಣ್ , ಮಹೇಶ್ ಬಾಬು ಸೇರಿದಂತೆ ಕಾಲಿವುಡ್ ಮಾಲಿವುಡ್ ಟಾಲಿವುಡ್ ಅಲ್ ಮೋಸ್ಟ್ ಆಲ್ ಕಲಾವಿದರು ನಮ್ಮ ಅಪ್ಪು ಅವನ್ನ ಇನ್ಸ್ಪರೇಷನ್ ಆಗಿ ಇಟ್ಟಕೊಂಡು ಅವರ ಡ್ಯಾನ್ಸ್ ಆಂಡ್ ಸ್ಟೆಂಟ್ಸ್ಗಳಿಗೆ ತಲೆಬಾಗಿದವರು.. ಕನ್ನಡದಲೇ ಇದ್ಕೊಂಡು ಅಕ್ಕ ಪಕ್ಕದ ಭಾಷೆಯ ತನಕ ಸದ್ದು ಮಾಡಿದ ಒಬ್ಬ ಫರ್ಫೆಕ್ಟ್ ಕಲಾವಿದನನ್ನ ಕನ್ನಡ ಚಿತ್ರರಂಗ ಕಳೆದುಕೊಂಡಿದ್ದು ನಿಜಕ್ಕೂ ದುರಂತ.. ಅಭಿಮಾನಿಗಳ ಪಾಲಿಗೆ ಪುನೀತ್ ರಾಜ್ ಕುಮಾರ್ ಸದಾ ಧೀಮಂತ ಶ್ರೀಮಂತ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post