ಪುನೀತ್ ರಾಜ್ಕುಮಾರ್ ನಿಧನರಾದ ಸಂದರ್ಭದಲ್ಲಿ ನಟ ರಜಿನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರದಿಂದ ರಜಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ರಜಿನಿಕಾಂತ್ ಅವರ ಆಪ್ತ ಸ್ನೇಹಿತ ರಾಜ್ ಬಹದ್ದೂರ್ ತಿಳಿಸಿದ್ದಾರೆ.
ನ್ಯೂಸ್ಫಸ್ಟ್ನೊಂದಿಗೆ ಮಾತನಾಡಿದ ರಾಜ್ ಬಹದ್ದೂರ್, ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ರಜಿನಿ ಒಳ್ಳೆ ಒಡನಾಟ ಹೊಂದಿದ್ದಾರೆ. ಬೆಂಗಳೂರಿಗೆ ಬಂದಾಗ ಎಷ್ಟೋ ಸರಿ ನಾನು ಆತನೊಂದಿಗೆ ರಾಜ್ ಕುಮಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದೀನಿ. ರಜಿನಿ ಕಂಡರೇ ರಾಜ್ಕುಮಾರ್ ಹಾಗೂ ಪುನೀತ್ ಅವರಿಗೆ ಬಹಳ ಇಷ್ಟ. ರಾಜ್ಕುಮಾರ್ ನಮ್ಮನ್ನು ಅಗಲಿದ ಬಳಿಕವೂ ನಾವು ಆ ಮನೆಗೆ ಭೇಟಿ ನೀಡಿದ್ದೇವು.
ರಜಿನಿ ಬಂದ ಕೂಡಲೇ ಅಪ್ಪು ಕಾಲಿಗೆ ಬಿದ್ದು, ಅಪ್ಪಿಕೊಂಡು ಅಂಕಲ್ ಅಂಕಲ್ ಅಂತಾ ಪ್ರೀತಿ ತೋರಿಸುತ್ತಿದ್ದರು. ಅಂತಹ ಅಪ್ಪು ಇವತ್ತು ಇಲ್ಲ ಅಂತ ಕೇಳಿ ರಜಿನಿಕಾಂತ್ ಪಟ್ಟ ವೇದನೆ ಬೇರೆ ಯಾವತ್ತೂ ಪಟ್ಟಿಲ್ಲ. ಅವರು ಅವತ್ತು ಬರಬೇಕಿತ್ತು. ಆದರೆ ಆರೋಗ್ಯದ ಕಾರಣದಿಂದ ಆಗಲಿಲ್ಲ. ಸದ್ಯ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ಭೇಟಿ ಕೊಟ್ಟು ರಾಜ್ಕುಮಾರ್ ಕುಟುಂಬಸ್ಥರನ್ನು ಭೇಟಿ ಮಾಡುತ್ತಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post