ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ, ಟೀಮ್ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸ್ತು. ಎಂದಿನಂತೆ ಇನ್ನಿಂಗ್ಸ್ ಆರಂಭಿಸಿದ್ದ KL ರಾಹುಲ್ – ರೋಹಿತ್ ಶರ್ಮಾ, ಅಬ್ಬರದ ಬ್ಯಾಟಿಂಗ್ ನಡೆಸಿ ಟೆರ್ರಿಫಿಕ್ ಸ್ಟಾರ್ಟ್ ನೀಡಿದ್ರು. ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಈ ಜೋಡಿ, ಬೌಲರ್ಗಳ ಬೆಂಡೆತ್ತಿದ್ದಲ್ಲದೆ, ಮೊದಲ ವಿಕೆಟ್ಗೆ 140 ರನ್ಗಳ ಜೊತೆಯಾಟವಾಡಿದ್ರು.
ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದು ಅರ್ಧಶತಕವನ್ನ ಸಿಡಿಸಿದ ರಾಹುಲ್-ರೋಹಿತ್, ತಂಡಕ್ಕೆ ರನ್ ಮಳೆ ಸುರಿಸಿದ್ರು. ಆದರೆ ರನ್ಧಾರೆ ಎರೆಯುತ್ತಿದ್ದ ಈ ಜೋಡಿಗೆ ಗುಲ್ಬದಿನ್, ಜನ್ನತ್ ಬ್ರೇಕ್ ಥ್ರೂ ನೀಡಿದ್ರು. ರಾಹುಲ್ 69, ರೋಹಿತ್ 74 ರನ್ ಸಿಡಿಸಿ ಔಟಾದ ಬೆನ್ನಲ್ಲೇ ಕಣಕ್ಕಿಳಿದ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ರು. ಪರಿಣಾಮ ಟೀಮ್ ಇಂಡಿಯಾ ನಿಗದಿನ 20 ಓವರ್ಗಳಲ್ಲಿ 210ರನ್ಗಳ ಬೃಹತ್ ಮೊತ್ತ ಪೇರಿಸಿತು.
ಟೀಮ್ ಇಂಡಿಯಾ 211ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ಆಫ್ಘಾನಿಸ್ತಾನ, ಆರಂಭದಲ್ಲೇ ಮುಗ್ಗರಿಸಿತು. ಹಜರುತ್ತುಲ್ಲಾ ಜಜಾಯ್ ಮತ್ತು ಮೊಹಮ್ಮದ್ ಶಹಜಾಬ್, ರೆಹಮಾನ್ಉಲ್ಲಾ ಗುರ್ಬಾಜ್ ಬೇಗನೇ ಬೂಮ್ರಾ, ಶಮಿ, ಜಡೇಜಾಗೆ ವಿಕೆಟ್ ಒಪ್ಪಿಸಿ, ತಂಡವನ್ನ ಇಕ್ಕಟ್ಟಿಗೆ ಸಿಲುಕಿಸಿದ್ರು. ಇದರ ಬೆನ್ನಲ್ಲೇ ಅಬ್ಬರಿಸುವ ಮುನ್ಸೂಚನೆ ನೀಡಿದ ಗುಲ್ಬದಿನ್ ನಯೀಬ್, ಜಾರ್ಡನ್ಗೆ ಆರ್.ಅಶ್ವಿನ್ ಗೇಟ್ಪಾಸ್ ನೀಡಿದ್ರು.
ಒಂದಾದ ಮೊಹಮ್ಮದ್ ನಬಿ-ಜನ್ನತ್ 50ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಇನ್ನು ನಬಿ, ರಶೀದ್ ಖಾನ್ಗೆ ಶಮಿ ಗೇಟ್ ಪಾಸ್ ನೀಡಿದ್ರೆ, ಜನ್ನತ್ 42 ರನ್ಗಳಿಸಿ ಅಜೇಯವಾಗಿ ಉಳಿದ್ರು. ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡ ಆಫ್ಘನ್, 144ರನ್ ಗಳಿಸಲಷ್ಟೆ ಶಕ್ತವಾಯ್ತು. ಪರಿಣಾಮ ಭಾರತ 66 ರನ್ಗಳ ಭರ್ಜರಿ ಜಯ ದಾಖಲಿಸಿದ್ದಲ್ಲೆ, ಸೆಮಿಫೈನಲ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post