ಬೆಳಗಾವಿ: ಇವತ್ತು ದೀಪಾವಳಿ. ಎಲ್ಲರೂ ಹಬ್ಬದ ಗುಂಗಿನಲ್ಲಿದ್ರು. ಆದ್ರೆ, ಈ ಖದೀಮರಿಗೆ ಎಲ್ಲಿದೆ ಹಬ್ಬ? ಕಳ್ಳತನ ಮಾಡೋದೆ ಅವ್ರಿಗೊಂದು ಹಬ್ಬ ಇದ್ದಂಗೆ. ನಾವೀಗ ಹೇಳೋಕೆ ಹೊರಟಿರೋ ಕಳ್ಳರು ಸಾಮಾನ್ಯರಲ್ಲ. ಮಕ್ಕಳ ಕಳ್ಳರು. ಪೋಷಕರೇ ಎಚ್ಚರ.. ನಿಮ್ಮ ಮಗು ಇಲ್ಲಿ ಹೊರಗಡೆ ಆಡ್ತಿರಬಹುದು ಅಂತಾ ನಿರ್ಲಕ್ಷ್ಯ ವಹಿಸೋದನ್ನ ಬಿಡಿ. ಯಾಕಂದ್ರೆ ಈ ಸ್ಟೋರಿ ಓದಿ.
ಮಕ್ಕಳನ್ನು ಕ್ಷಣ ಮಾತ್ರದಲ್ಲೇ ಎಸ್ಕೇಪ್ ಮಾಡ್ತಾರೆ..
ಚಾಕೋಲೇಟ್ ಆಸೆ ತೋರಿಸಿ ಕಳ್ಳತನಕ್ಕೆ ಯತ್ನ..
ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಆಕ್ಟೀವ್ ಆಗಿದೆ. ಇವತ್ತು ಸ್ವಲ್ಪ ಎಚ್ಚರ ತಪ್ಪಿದ್ರೂ ಇಲ್ಲಿ ಆಟವಾಡ್ತಿದಾರಲ್ಲಾ ಈ ಮುದ್ದು ಮಕ್ಕಳು ಕಿಡ್ನಾಪ್ ಆಗ್ತಿದ್ರು. ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ಉಮೇಶ್ ಕಾಂಬ್ಳೇ ಅನ್ನೋರ ಮಕ್ಕಳು ಹಬ್ಬ ಅಂತಾ ಹೊಸ ಬಟ್ಟೆ ತೊಟ್ಟು ಆಟವಾಡ್ತಿದ್ರು. ಅಷ್ಟರಲ್ಲೇ ಓಮಿನಿ ಕಾರಲ್ಲಿ ಬಂದ ನಾಲ್ಕು ಜನ ಮುುಸುಕುಧಾರಿ ಕಳ್ಳರು ಈ ಇಬ್ಬರು ಮಕ್ಕಳಿಗೆ ಚಾಕೋಲೇಟ್ ಆಸೆ ತೋರಿಸಿದ್ದಾರೆ. ಮಕ್ಕಳು ಬೇಡ ಅಂದಿದ್ದಕ್ಕೆ ರಸ್ತೆ ಮಧ್ಯೆ ಎಸೆದಿದ್ದಾರೆ. ಬಿದ್ದ ಚಾಕೋಲೇಟ್‌ನ ಇನ್ನೇನು ಮಕ್ಕಳು ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಅವ್ರನ್ನು ಕಿಡ್ನಾಪ್ ಮಾಡೋಕೆ ಹೋಗಿದ್ದಾರೆ. ಆದ್ರೆ, ಸ್ಥಳೀಯರು ನೋಡಿ ಕಿರುಚಾಡುತ್ತಿದ್ದಂತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಹಬ್ಬದ ದಿನವೇ ನಡೆದು ಹೋಗ್ತಿತ್ತು ಅವಘಡ..
ಇದು ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಒಂದು ತಿಂಗಳ ಹಿಂದೆ ಅಜ್ಜಿ ಜತೆಗೆ ದೇವಸ್ಥಾನಕ್ಕೆ ಹೋಗಿದ್ದ ಮಗು ಕಿಡ್ನಾಪ್ ಆಗಿದ್ದು ಇನ್ನೂ ಪತ್ತೆಯಾಗಿಲ್ಲ. ಬೆಳಗಾವಿ ತಾಲೂಕಿನ ಗೋಡವಾಡ ಗ್ರಾಮದ 2 ವರ್ಷದ ಈ ಪುಟ್ಟ ಕಂದಮ್ಮ ಆರೋಹಿ ಕಿಡ್ನಾಪ್ ಆಗಿದ್ಲು. ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೂ ಇನ್ನೂ ಪತ್ತೆಯಾಗಿಲ್ಲ. ಎಷ್ಟೇ ಹುಡುಕಿದ್ರೂ ಮಗುವಿನ ಸುಳಿವು ಸಿಕ್ತಿಲ್ಲ.
ಖದೀಮರ ಕೈಯಲ್ಲಿ ಸಿಕ್ಕ ಮಕ್ಕಳು ಸ್ಥಳೀಯರ ಕೂಗಾಟದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಳಗಾವಿಯಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಌಕ್ಟೀವ್ ಆಗಿದ್ದು, ಪೋಷಕರು ಎಚ್ಚರಿಕೆಯಿಂದಿರಬೇಕಾಗಿದೆ. ಜೊತೆಗೆ ಕಳ್ಳರ ಆಟಾಟೋಪಕ್ಕೆ ಬ್ರೇಕ್ ಹಾಕೋ ಕೆಲಸವೂ ಪೊಲೀಸರಿಂದಾಗಬೇಕಾಗಿದೆ.
ವಿಶೇಷ ವರದಿ: ಶ್ರೀಕಾಂತ್ ಕುಬಕಡ್ಡಿ, ನ್ಯೂಸ್‌ಫಸ್ಟ್, ಬೆಳಗಾವಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post