ಕ್ರಿಕೆಟ್ ಲೋಕದ ರನ್ ಮಷಿನ್ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
1988ನೇ ಇಸವಿಯ ನವೆಂಬರ್ 5ರಂದು ಜನಿಸಿರುವ ವಿರಾಟ್, ಸಮಕಾಲೀನ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾಗಿದ್ದಾರೆ. 2008ರಲ್ಲಿ ತಮ್ಮ 19ರ ಹರೆಯದಲ್ಲಿ ವಿರಾಟ್ ಕೊಹ್ಲಿ ಭಾರತಕ್ಕೆ ಅಂಡರ್ 19 ವಿಶ್ವಕಪ್ ದೊರಕಿಸಿಕೊಟ್ಟರು.
ಅಲ್ಲಿಂದ ರಾಷ್ಟ್ರೀಯ ತಂಡಕ್ಕೆ ಸೇರಿದ ಕಿಂಗ್ ಕೊಹ್ಲಿ ಹಿಂತಿರುಗಿ ನೋಡಿಯೇ ಇಲ್ಲ. ಭಾರತದ ಪರ 96 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿರಾಟ್, 7765 ರನ್ಗಳನ್ನ ಗಳಿಸಿದ್ರೆ, 254 ಏಕದಿನ ಪಂದ್ಯಗಳನ್ನ ಆಡಿ, 12169ರನ್ಗಳನ್ನ ಗಳಿಸಿದ್ದಾರೆ. ಹಾಗೆ ಟಿ-20ಯಲ್ಲಿ 93 ಪಂದ್ಯಗಳನ್ನ ಆಡಿ 3225 ರನ್ಗಳನ್ನ ಕಲೆ ಹಾಕಿದ್ರೆ, ಐಪಿಎಲ್ನಲ್ಲಿ 207 ಪಂದ್ಯಗಳನ್ನ ಆಡಿ, 6283 ರನ್ಗಳನ್ನ ಬಾರಿಸಿ ಆಡುತ್ತಿದ್ದಾರೆ.
ಸದ್ಯ ಟಿ-20 ವಿಶ್ವಕಪ್ನಲ್ಲಿ ಬ್ಯುಸಿ ಆಗಿರುವ ಕೊಹ್ಲಿ, ಈ ಟೂರ್ನಿ ಮುಗಿದ ಬಳಿಕ ಟಿ-20 ಕ್ಯಾಪ್ಟನ್ಸಿ ಜವಾಬ್ದಾರಿಯನ್ನ ತೊರೆಯಲಿದ್ದಾರೆ. ಇನ್ನು ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.
Happy Birthday, @imVkohli!
Thank you for everything that you are to RCB, your teammates and to millions of fans around the world. Stay blessed, King! 😇#PlayBold #WeAreChallengers #HappyBirthdayViratKohli #ViratKohli pic.twitter.com/d44BrQJFU5
— Royal Challengers Bangalore (@RCBTweets) November 5, 2021
Always smiling 😁
Happy birthday to India captain Virat Kohli.
Will he get a win tonight as a present?#T20WorldCup pic.twitter.com/8aZKj8Lqgn
— ICC (@ICC) November 5, 2021
Not everyone is as lucky as me to be blessed with a elder brother like you. Thank you so much for coming into my life and standing by my side through thick and thin. I hope you get all that you truly deserve. Happy Birthday king 👑 @imVkohli pic.twitter.com/pTn8NBZrHh
— Mohammed Siraj (@mdsirajofficial) November 5, 2021
Wishing Our King Kohli @imVkohli A Very Happy Birthday 🥳#HappyBirthdayViratKohli pic.twitter.com/2SbMQK16Nw
— Rohit Sharma Trends™ (@TrendsRohit) November 5, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post