ಮುಂಬೈ: ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಲಿಮಿಟೆಡ್ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕುಟುಂಬಕ್ಕಾಗಿ ಲಂಡನ್ನಲ್ಲಿ ಮನೆ ಮಾಡಲು ಮುಂದಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು. ಮೂಲಗಳ ಮಾಹಿತಿ ಅನ್ವಯ ಅಂಬಾನಿ, ಲಂಡನ್ನಲ್ಲಿ ಇತ್ತೀಚೆಗೆ ಖರೀದಿ ಮಾಡಿದ್ದ 300 ಎಕರೆ ವಿಸ್ತೀರ್ಣದಲ್ಲಿ ನಿವಾಸ ಮಾಡಲು ಮುಂದಾಗಿದ್ದರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಿಲಯನ್ಸ್ ಸಂಸ್ಥೆ ಅಂತಹ ಯಾವುದೇ ಪ್ಲಾನ್ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೊರೋನಾ ಲಾಕ್ಡೌನ್ ಹಾಗೂ ಸೋಂಕಿನ ತೀವ್ರತೆ ಹೆಚ್ಚಿದ್ದ ಸಮಯದಲ್ಲಿ ಅಂಬಾನಿ ಕುಟುಂಬ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದ್ದ ಐಷಾರಾಮಿ ಆಂಟಿಲಿಯಾ ನಿವಾಸದಲ್ಲೇ ಕಳೆದಿದ್ದರು. ಈ ವೇಳೆ ಕುಟುಂಬಸ್ಥರಿಗೆ ತಮಗೆ ಅಂತ ಮತ್ತೊಂದು ನಿವಾಸದ ಅಗತ್ಯವಿತ್ತು ಎಂಬ ಭಾವನೆ ಮೂಡಿತ್ತಂತೆ. ಈ ಹಿನ್ನೆಲೆಯಲ್ಲಿ ಹೊಸ ನಿವಾಸದ ನಿರ್ಮಾಣಕ್ಕೆ ಅಂಬಾನಿ ಮುಂದಾಗಿದ್ದಾರಂತೆ ಎಂದು ವರದಿಯಾಗಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರೋ ರಿಲಯನ್ಸ್ ಸಂಸ್ಥೆ ಮುಖ್ಯಸ್ಥರು, ಲಂಡನ್ ಅಥವಾ ವಿಶ್ವದ ಬೇರೆ ಯಾವುದೇ ಸ್ಥಳಕ್ಕೆ ರಿಲೋಕೇಟ್ ಆಗುವ ಯಾವ ಚಿಂತನೆಯೂ ಇಲ್ಲ. ಅಲ್ಲದೇ ನಮ್ಮ ರಿಲಿಯನ್ಸ್ ಸಂಸ್ಥೆ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ. ಭಾರತದ ಖ್ಯಾತಿಯನ್ನು ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಪಸರಿಸಲು ಕಾರ್ಯನಿರ್ವಹಿಸುತ್ತಿದೆ. ಲಂಡ್ನಲ್ಲಿ ಖರೀದಿ ಮಾಡಲಾದ ಜಾಗದಲ್ಲಿ ಸ್ಪೋರ್ಟ್ಸ್ ಕ್ಲಬ್ ಒಂದು ನಿರ್ಮಾಣ ಮಾಡಲಿದ್ದೇವೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post