ಬೆಂಗಳೂರು: ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7. ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ 10 ರೂಪಾಯಿ ಹಾಗೂ 5 ರೂಪಾಯಿ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಆ ಮೂಲಕ ದೇಶದ ಮೊದಲ ರಾಜ್ಯವಾಗಿ ಇಂಧನ ದರ ಇಳಿಸುವ ನಿರ್ಧಾರ ಮಾಡಿದ್ದರು.
ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ ಶೇಕಡಾ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ ಶೇಕಡಾ 14.34ಕ್ಕೆ ಇಳಿಸಿರುತ್ತದೆ. ಇದರಿಂದ ನ.3ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು 113.93 ರೂಪಾಯಿಯಿಂದ 100.63 ರೂಪಾಯಿಗೆ ಬರಲಿದ್ದು, ಒಟ್ಟಾರೆ ದರ ಕಡಿತ 13.30 ರೂಪಾಯಿ ಆಗಲಿದೆ. ಇನ್ನು ನ.3 ರಂದು ಇದ್ದ ಡೀಸೆಲ್ನ ಚಿಲ್ಲರೆ ಮಾರಾಟ ದರವು 104.50 ರೂಪಾಯಿಯಿಂದ 85.03 ರೂಪಾಯಿಗೆ ಇಳಿಕೆ ಆಗಲಿದೆ.. ಒಟ್ಟಾರೆ 19.47 ರೂಪಾಯಿ ದರ ಕಡಿತ ಆಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post