ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಉತ್ತರಾಖಂಡ್ನ ಕೇದಾರನಾಥ್ ತಲುಪಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆದಿ ಶಂಕರಾಚಾರ್ಯರ ಪ್ರತಿಮೆ ಹಾಗೂ ಸಮಾಧಿಯನ್ನ ಅನಾವರಣ ಮಾಡಲಿದ್ದಾರೆ.
ಆದಿ ಗುರು ಶಂಕರಾಚಾರ್ಯರ ಸಮಾಧಿ ಜೀಣೋದ್ಧಾರ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅದನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 2013ರ ಉತ್ತರಾಖಂಡ್ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿಯನ್ನು ಧ್ವಂಸಗೊಂಡಿತ್ತು, ಇದೀಗ ಅದನ್ನ ಪುನರ್ ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಯಾತ್ರಾರ್ಥಿಗಳ ನಿವಾಸ ಸರಸ್ವತಿ ಘಾಟ್ ಕೂಡ ಸಿದ್ಧಗೊಂಡಿದ್ದು, ಅದು ಕೂಡ ಲೋಕಾರ್ಪಣೆಯಾಗುತ್ತಿದೆ.
ಸರಸ್ವತಿ ರಿಟೈನಿಂಗ್ ವಾಲ್ ಅಸ್ಥಾಪಥ್ ಮತ್ತು ಘಾಟ್‌ಗಳು, ಮಂದಾಕಿನಿ ರಿಟೈನಿಂಗ್ ವಾಲ್ ಅಸ್ಥಾಪತ್, ತೀರ್ಥ ಪುರೋಹಿತರ ಮನೆಗಳು ಮತ್ತು ಮಂದಾಕಿನಿ ನದಿಯ ಗರುಡ್ ಚಟ್ಟಿ ಸೇತುವೆ ಸೇರಿದಂತೆ ₹400 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಾಗಾರಿಗಳನ್ನ ಉದ್ಘಾಟನೆ ಮಾಡಲಿದ್ದಾರೆ. ನಂತರ ಸಾರ್ವಜನಿಕರನ್ನ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
Glimpses of the 12-foot Murti of Adi Guru Adi Shankaracharya to be inaugurated by PM Sh @narendramodi ji in Kedarnath tomorrow, Nov 5th.
On this occasion, pogrammes are being organized at Jyotirlingas, Jyotishpeeth & at the birthplace of the Jagadguru in Kalady, Kerala. pic.twitter.com/H71CHtX3af
— G Kishan Reddy (@kishanreddybjp) November 4, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post