ಕರುನಾಡಿನ ರಾಜಕುಮಾರ ನಮ್ಮನ್ನ ಅಗಲಿ 7 ದಿನಗಳು ಕಳೆದಿವೆ. 5 ದಿನಕ್ಕೆ ಹಾಲು ತುಪ್ಪ ಕಾರ್ಯ ಮುಗಿಸಿರುವ ದೊಡ್ಮನೆ ಕುಟುಂಬಸ್ಥರು ಈಗ 11 ನೇ ದಿನಕ್ಕೆ ವೈಕುಂಠ ಸಮಾರಾಧನೆ ಕಾರ್ಯ ಹಮ್ಮಿಕೊಂಡಿದ್ದಾರೆ. ಜೊತೆಗೆ ಅಣ್ಣಾವ್ರ ಕುಟುಂಬ, ಅಭಿಮಾನಿ ದೇವರುಗಳಿಗಾಗಿಯೂ ಕಾರ್ಯಕ್ರಮ ಆಯೋಜಿಸಿದೆ.
ಡಾ.ರಾಜಕುಮಾರ್ ಅಭಿಮಾನಿಗಳೇ ದೇವರು ಎಂದು ಹೇಳಿ, ಅಭಿಮಾನಿಗಳ ಪಾಲಿಗೆ ದೇವರಾಗಿದ್ರು. ಪುನೀತ್ ರಾಜಕುಮಾರ್ ಅಭಿಮಾನಿಗಳೆ ನಮ್ಮನೆ ಉಸಿರು ಅಂತ ಹೇಳಿ, ಎಲ್ಲರ ಹೃದಯದಲ್ಲೂ ಅರಸನಾಗಿ ನೆಲೆಸಿದ್ರು. ನೀವೆ ನಮ್ಮನೆ ಉಸಿರು ಅಂತಿದ್ದ ಆರಾದ್ಯದೈವ ಈಗ ಉಸಿರು ಚೆಲ್ಲಿ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲಾಗದ್ದಂತ ನೋವು ಕೊಟ್ಟು ಹೊರಟು ಹೋದ್ರು. ನೋವಲ್ಲೂ ದೊಡ್ಮನೆ ಕುಟುಂಬ, ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವೈಕುಂಠ ಸಮಾರಾಧನೆ ಕಾರ್ಯ ಹಮ್ಮಿಕೊಂಡಿದೆ.
ಅಪ್ಪು ನಿಧನವಾದ ಐದನೇ ದಿನಕ್ಕೆ ಹಾಲು ತುಪ್ಪ ಕಾರ್ಯ ಮುಗಿಸಿರುವ ಅಣ್ಣಾವ್ರ ಕುಟುಂಬ, ಈಗ 11ನೇ ದಿನಕ್ಕೆ ವೈಕುಂಠ ಸಮಾರಾಧನೆ ಕಾರ್ಯ ಮಾಡೋಕೆ ತಯಾರಿ ಮಾಡ್ಕೋತಿದ್ದಾರೆ. ಸೋಮವಾರ ಆಂದ್ರೆ ನವಂಬರ್ 8ಕ್ಕೆ ಅಣ್ಣಾವ್ರ ಕುಟುಂಬಸ್ಥರು ಮನೆಯಲ್ಲೆ ಅಪ್ಪು ಅವರ ವೈಕುಂಠ ಸಮಾರಾಧಾನೆ ಕಾರ್ಯ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ಕೆ ಕುಟುಂಬಸ್ಥರು, ಚಿತ್ರರಂಗದ ಗಣ್ಯರಿಗಷ್ಟೆ ಅವಕಾಶವಿರಲಿದೆ.
ಅಣ್ಣಾವ್ರ ಕಾಲದಿಂದಲೂ ದೊಡ್ಮನೆಯವರು ಸುಖ ದುಃಖ ಎರಡನ್ನು ಅಭಿಮಾನಿಗಳ ಜೊತೆ ಹಂಚಿಕೊಂಡು ಬಂದಿದ್ದಾರೆ. ಈಗಲೂ ಮುದ್ದಿನ ಮಗನನ್ನು ಕಳೆದುಕೊಂಡ ನೋವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಶಾಸ್ತ್ರೋಕ್ತವಾಗಿ 11ನೇ ದಿನದ ಕಾರ್ಯ ಮುಗಿಸಿ. ಮರುದಿನವೇ ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸೋಕೆ ಅವಕಾಶ ಮಾಡಿ ಕೊಡಲು ನಿರ್ಧಾರಿಸಿದ್ದಾರೆ. ನವಂಬರ್ 9 ಮಂಗಳವಾರ ಫ್ಯಾಲೇಸ್ ಗ್ರೌಂಡ್ನಲ್ಲಿ ಅಭಿಮಾನಿಗಳಿಗೆ ಅಂತಿಮ ನಮನ ಸಲ್ಲಿಸೋದಕ್ಕೆ ಅವಕಾಶ ಮಾಡಿಕೊಡೋದಾಗಿ ಪುನೀತ್ ಸೋದರ ಮಾವ ಚಿನ್ನೇಗೌಡ್ರು ನ್ಯೂಸ್ ಫಸ್ಟ್ಗೆ ತಿಳಿಸಿದ್ದಾರೆ.
ಅಪ್ಪು ನೆನಪಿನಲ್ಲಿ ಅಭಿಮಾನಿಗಳಿಗೆ ಅನ್ನದಾನ ಮಾಡಲು ದೊಡ್ಮನೆಯವರು ತಯಾರಿ ಮಾಡ್ಕೋತಿದ್ದಾರೆ. ಸದ್ಯ ಕಾರ್ಯಕ್ರಮದ ಬಗ್ಗೆ ರೂಪುರೇಷೆ ಈಗಷ್ಟೆ ಸಿದ್ಧವಾಗ್ತಿದ್ದು, ಫ್ಯಾಲೇಸ್ ಗ್ರೌಂಡ್ನಲ್ಲಿ ಯಾವ ಗೇಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post