ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಇಡೀ ಅಭಿಮಾನಿ ಸಾಗರ ಕರುನಾಡಿನ ಕನ್ನಡಾಭಿಮಾನಿಗಳು ದುಃಖದಲ್ಲಿದೆ.. ಅಪ್ಪು ಅವರನ್ನ ಕಳೆದುಕೊಂಡು ಏಳು ದಿನವಾದ್ರು ಅವರ ನೆನಪಿನ ಸಾಗರದಲ್ಲಿ ಅಭಿಮಾಗಳು ಹಾಗೂ ಅಪ್ಪು ಕುಟುಂಬದವರಿದ್ದಾರೆ.
29ನೇ ತಾರೀಖ್ ಅಕ್ಟೋಬರ್ 2021 ಬೆಳಗ್ಗೆ 11 ಗಂಟೆ 1 ನಿಮಿಷ.. ದೊಡ್ಮನೆಯ ರಾಜಕುಮಾರ ತನ್ನ ಮನೆಯಿಂದ ಹೊರ ನಡೆದ ಸಮಯ.. ಚಿಕ್ಕದೇನೋ ಏನೋ ಪುಟ್ಟ ಎದೆನೋವೇನೋ ಅಂದುಕೊಂಡು ಮನೆಯಿಂದ ಹೊರ ನಡೆದ ಯುವರತ್ನ ಅಭಿಮಾನಿಳ ಹೃದಯ ಹೊಡೆದು ಹೋಗುವಂಥಹ ಸುದ್ದಿಯನ್ನ ಕೊಟ್ಟು ಬಿಟ್ಟರು.
ಶುಕ್ರವಾರ ಬೆಳಗ್ಗೆ 11ಗಂಟೆಯಿಂದ 11.40ರ ಒಳಗೆ ಪುನೀತ್ ರಾಜ್ ಕುಮಾರ್ ಅವರ ಪ್ರಾಣ ಪಕ್ಷಿ ಹಾರಿಹೋಯಿತು.. ತನ್ನ ಫ್ಯಾಮಿಲಿ ಡಾಕ್ಟರ್ ರಾಮಣ ಶ್ರೀ ಕ್ಲಿನಿಕ್ಗೆ ಚೆಕಪ್ಗೆ ಹೋದವರು ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ ವಿಕ್ರಂ ಆಸ್ಪತ್ರೆ ದಾರಿ ಹಿಡಿದ್ರು.. ರಮಣ ಶ್ರೀ ಕ್ಲೀನಿಕ್ನಲ್ಲೇ 11.10ರಿಂದ 11.30 ತನಕ ಕಾಲ ಕಳೆದ ಅಪ್ಪು ವಿಕ್ರಂ ಆಸ್ಪತ್ರೆಗೆ ತೆರಳುವ ದಾರಿ ಮಧ್ಯದಲ್ಲಿ ವಿಡ್ಸಂರ್ ಮ್ಯಾನರ್ಸ್ ಸರ್ಕಲ್ನಲ್ಲಿ ತನ್ನ ಧರ್ಮ ಪತ್ನಿ ಅಶ್ವಿನಿ ಅವರ ತೊಡೆಯ ಮೇಲೆ ಪ್ರಾಣ ಬಿಟ್ಟುಬಿಟ್ಟಿದ್ದರು.. ವಿಕ್ರಂ ಆಸ್ಪತ್ರೆಯ ವೈದ್ಯ ಸಿಬಂಧಿ ಎಷ್ಟೇ ಪ್ರಯತ್ನಸಿದರು ಪರಿಸ್ಥಿತಿ ಕೈ ಮೀರಿ ಹೋಗಿತ್ತು.. ಇನ್ನೊಂದು ಹತ್ತು ನಿಮಿಷ ಟೈಮ್ ಸಿಕ್ಕಿದ್ರೆ ಏನಾದ್ರು ಪವಾಡ ಆಗಿ ಬಿಡೋದೇನೋ.. ಆದ್ರೆ ಆಗ್ಲಿಲ್ಲ.. ಈ ಊಹೇಯ ಮಾತನ್ನ ನಾವು ಹೇಳ್ತಿಲ್ಲ.. ಸ್ವತಃ ಪುನೀತ್ ರಾಜ್ ಕುಮಾರ್ ಅವರ ನೆಚ್ಚಿನ ಹಿರಿಯಣ್ಣ ಶಿವರಾಜ್ ಕುಮಾರ್ ಹೇಳಿದ್ದು.
ವಿಧಿ ಇನ್ನೊಂದು ಹತ್ತು ನಿಮಿಷ ಟೈಮ್ ಕೊಡಬಾರದಿತ್ತಾ..?
ಅಪ್ಪು ಕಂಡ್ರೆ ಇಡೀ ದೊಡ್ಮನೆಗೆ ಬಲು ಇಷ್ಟ.. ಇಡಿ ನಾಡಿಗೆ ಇಷ್ಟ.. ಇನ್ನೂ ಅವರ ಹಿರಿಯಣ್ಣ ಶಿವಣ್ಣನಿಗೆ ಇಷ್ಟ ಇರೋದಿಲ್ವೇ.. ಸ್ಯಾಂಡಲ್ವುಡ್ನ ದಿ ಬೆಸ್ಟ್ ಬ್ರದರ್ಸ್ ಪಟ್ಟಿಯಲ್ಲಿ ಅಪ್ಪು ಮತ್ತು ಶಿವಣ್ಣನ ಲಿಸ್ಟ್ ಸದಾ ಇದ್ದೇ ಇರುತ್ತೆ.. ಶಿವಣ್ಣ ನಾನು ಅಪ್ಪು ಅಭಿಮಾನಿ ಅಂದ್ರೆ, ಅಪ್ಪು ಅವರು ನಾನು ಶಿವಣ್ಣನ ಬಿಗ್ ಫ್ಯಾನ್ ಅನ್ನುತ್ತಿದ್ದರು.. ಯಾವಾಗಲು ಜೊತೆ ಜೊತೆಗೆ ಇರ್ತಿದ್ರು.. ಕೆಲ ದಿನಗಳ ಹಿಂದೆ ಸಲಗ ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಸ್ವತಃ ಅಪ್ಪು ಅವರೇ ನಾನು ಶಿವಣ್ಣನ ಬಿಗ್ ಫ್ಯಾನ್.. ಶಿವಣ್ಣನಿಗೊಂದು ಸಿನಿಮಾ ಡೈರೆಕ್ಷನ್ ಮಾಡಬೇಕು ಅಂದ ಮಾತು ಯಾರಿಗೆ ತಾನೆ ಮರೆಯೋಕೆ ಸಾಧ್ಯ ಹೇಳಿ.
ಇಷ್ಟೆಲ್ಲ ಅನ್ಯೂನವಾಗಿದ್ದ ರಿಯಲ್ ಸಹೋದರರು ಶಿವಣ್ಣ ಮತ್ತು ಅಪ್ಪು. ರಾಜ್ಯಾದ್ಯಂತ 10ಕ್ಕೂ ಹೆಚ್ಚು ಜನ ಅಪ್ಪು ಅವರ ಅಗಲಿಕೆ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಈ ವಿಚಾರದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಶಿವಣ್ಣ , ಅಂದು ನನ್ನ ತಮ್ಮನಿಗೆ ವಿಧಿ ಇನ್ನೊಂದು ಹತ್ತು ನಿಮಿಷ ಹೆಚ್ಚು ಕೊಡಬಾರದಿತ್ತಾ ಎಂದು ಪ್ರತಿಕ್ರಿಯೆಸಿದ್ದಾರೆ.
ಏನೇ ಹೇಳಿ ಕಾಲ ಮಿಂಚೋಯ್ತು.. ಸ್ಯಾಂಡಲ್ವುಡ್ನ ‘‘ಪರಮಾತ್ಮ’’ ಪರಮಾತ್ಮನ ಪಾದ ಸೇರಿದ್ದಾರೆ.. ಇಡೀ ಅಭಿಮಾನಿ ದೇವ್ರುಗಳು ಅಪ್ಪು ಅಗಲಿಕೆಯ ನೋವಿನ ಸಾಗರದಲ್ಲಿದ್ದಾರೆ.. ವೀ ಆಲ್ ಮಿಸ್ ಯೂ ಅಪ್ಪು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post