ಬೆಂಗಳೂರು: ಪುನೀತ್ ರಾಜ್ಕುಮಾರ್ ಸಮಾಧಿ ಎದುರು ಮದುವೆಯಾಗಲು ನಿರ್ಧರಿಸಿದ್ದ ಜೋಡಿ ಇಂದು ಸಂಜೆ ವೇಳೆಗೆ ಕಂಠೀರವ ಸ್ಟುಡಿಯೋ ಪಕ್ಕದ ಆಂಜನೇಯ ದೇವಸ್ಥಾನದಲ್ಲಿ ಹೊಸಬಾಳಿಗೆ ಕಾಲಿಟ್ಟಿದೆ.
ಅಪ್ಪು ಸಮಾಧಿ ಎದುರು ಮದುವೆಯಾಗಲು ಬಳ್ಳಾರಿಯಿಂದ ಬೆಂಗಳೂರಿಗೆ ಗುರುರಾಜ್ ಮತ್ತು ಗಂಗಾ ಬಂದಿದ್ದರು. ಪುನೀತ್ ಸಮಾಧಿ ಮುಂದೆ ಸಪ್ತಪದಿ ತುಳಿಯಲು ಶಿವಣ್ಣ ಹಾಗೂ ರಾಘಣ್ಣ ಒಪ್ಪಿಗೆ ಕೊಟ್ಟಿದ್ದಾರೆ ಅಂತನೂ ಮಾಧ್ಯಮಗಳ ಮುಂದೆ ತಿಳಿಸಿದ್ರು. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ ರಾಜಕುಮಾರ್, ನವಜೋಡಿಗಳ ಜೊತೆ ಪೋಷಕರು ಬಂದಿದ್ರೆ ಅನುಮತಿ ಕೊಡುತ್ತಿದ್ವಿ. ಆದ್ರೆ ಅವರಿಬ್ಬರ ಜೊತೆ ಯಾವುದೇ ಪೋಷಕರಿಲ್ಲ.. ಪೋಷಕರು ಬಂದರೇ ಅನುಮತಿ ಕೊಡುತ್ತೇವೆ ಅಂತ ತಿಳಿಸಿದ್ದರು.
ಇದನ್ನೂ ಓದಿ:ಅಪ್ಪು ಸಮಾಧಿ ಎದುರು ಪ್ರೇಮಿಗಳ ಮದುವೆ.. ಏನಂದ್ರು ರಾಘಣ್ಣ?
ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಕಂಠೀರವ ಸ್ಟುಡಿಯೋ ಬಳಿಯೇ ಇರುವ ಆಂಜನೇಯ ದೇವಸ್ಥಾನದಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ನಾಳೆ ಶಿವಣ್ಣನ ಮನೆಗೆ ಹೋಗಿ ಆಶೀರ್ವಾದ ಪಡೆಯುವುದಾಗಿ ಗುರುರಾಜ್ ಮತ್ತು ಗಂಗಾ ದಂಪತಿ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post