ರಾಮನಗರ: ಈಗಷ್ಟೇ ಸಿಂದಗಿಯಲ್ಲಿ ಚುನಾವಣೆಯ ಹಿನ್ನೆಲೆ ಹಳ್ಳಿಗಳನ್ನು ನೋಡಿಕೊಂಡು ಬಂದಿದ್ದೀನಿ. ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ನೋಡಿ. ನನ್ನ ಖರ್ಚಿನಲ್ಲಿಯೇ ಬಸ್ ಮಾಡಿ ಕೊಡ್ತೇನೆ ಹೋಗಿ ಬನ್ನಿ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಚನ್ನಪಟ್ಟಣದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ ಮಾಜಿ ಸಿಎಂ, ನನ್ನ ಅಭಿವೃದ್ಧಿ ಬಗ್ಗೆ ಟೀಕೆ ಮಾಡುವವರಿಗೆ ನಾನು ಹೇಳ್ತಿದ್ದೇನೆ. ನಾನು ಚನ್ನಪಟ್ಟಣ ಶಾಸಕನಾಗಿ 3 ವರ್ಷ ಆಗಿದೆ. ಸಿಎಂ ಆಗಿ 14 ತಿಂಗಳಿದ್ದೆ. ಈ ಮೂರು ವರ್ಷದಲ್ಲಿ ಆಗಿರುವ ಅಭಿವೃದ್ಧಿ ನೋಡಿ. ಕಳೆದ 20 ವರ್ಷದಲ್ಲಿ ಆಗಿದ್ದ ಅಭಿವೃದ್ಧಿಯನ್ನು ನೋಡಿ ಎಂದು ಸವಾಲು ಎಸೆದರು.
ಜನತಾಪರ್ವಕ್ಕೆ ನಾಂದಿ.
ಹಾನಗಲ್ ಮಹಾಜನತೆಯ ಆತ್ಮೀಯ ಸ್ವಾಗತಕ್ಕೆ ನಾನು ಆಭಾರಿ. pic.twitter.com/hf02O0vnZG— H D Kumaraswamy (@hd_kumaraswamy) October 23, 2021
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಹೆಸರು ಪ್ರಸ್ತಾಪ ಮಾಡದೇ ಟೀಕೆ ಮಾಡಿದ ಹೆಚ್ಡಿಕೆ, ನನ್ನ ಬಗ್ಗೆ ಸುಖಾಸುಮ್ಮನ್ನೆ ಟೀಕೆ ಮಾಡಿದರೆ ನಾನು ಸೋಪ್ಪು ಹಾಕೋದಿಲ್ಲ. ಕಳೆದ ಅವಧಿಯಲ್ಲಿ ಪ್ರತಿ ಕಾಮಗಾರಿಗೂ ಶಾಸಕರಿಗೆ ಪೇಮೆಂಟ್ ಹೋಗಬೇಕಿತ್ತು. ಇಲ್ಲ ಎಂದರೇ ಅವರು ಗುದ್ದಲಿ ಪೂಜೆ ಆಗಮಿಸುತ್ತಲೇ ಇರಲಿಲ್ಲ. ಸುಮಾರು 5 ರಿಂದ 6 ಪರ್ಸೆಂಟ್ ಪೇಮೆಂಟ್ ಕೊಟ್ಟರೇ ಮಾತ್ರ ಭೂಮಿ ಪೂಜೆಗೆ ಬರುತ್ತಿದ್ದರು. ಈಗಲೂ ಕೆಲ ಕ್ಷೇತ್ರದಲ್ಲಿ ಈ ರೀತಿ ನಡೆಯುತ್ತಿದೆ. ಆದ್ರೆ ನಾನು ಓಪನ್ ಆಗಿ ಹೇಳ್ತೇನೆ. ಈಗಿರುವ ಗುತ್ತಿಗೆದಾರರನ್ನ ಕೇಳಿ ನೋಡಿ. ಜನರಿಗೆ ಗುಣಾತ್ಮಕ ಕೆಲಸ ಮಾಡಿ, ಯಾವುದೇ ಅಪೇಕ್ಷೆ ಇಲ್ಲ ಎಂದಿದ್ದೇನೆ. ಇದು ನನ್ನ ನೇಚರ್. ನಾವು ಇಷ್ಟೆಲ್ಲಾ ಅಭಿವೃದ್ಧಿ ಮಾಡಿದಕ್ಕೆ ಜನರು ಬದುಕುಲು ಆಗುತ್ತಿದೆ. ನನ್ನ ಅಭಿವೃದ್ಧಿ ನೋಡಿ ಟೀಕೆ ಮಾಡುವವರಿಗೆ ಒಂದು ಬಸ್ ಮಾಡಿ ಕೊಡುತ್ತೇನೆ. ಒಮ್ಮೆ ಸಿಂದಗಿಗೆ ಹೋಗಿ ಅಲ್ಲಿ ಹಳ್ಳಿಗಳಲ್ಲಿ ಜನ ಹೇಗೆ ಬದುಕುತ್ತಿದ್ದಾರೆ ನೋಡಿಕೊಂಡು ಬನ್ನಿ ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post