ಟೀಮ್ ಇಂಡಿಯಾ ದೊಡ್ಡ ಅಂತರದಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯ ಗೆದ್ದ ನಂತರ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜರಿಗೆ ಕೇಳಿದ ಪ್ರಶ್ನೆಯೊಂದು ಇಕ್ಕಟ್ಟಿಗೆ ಸಿಲುಕಿಸಿತ್ತು.
ಈ ವೇಳೆ ನೇರವಾಗಿ ಹಾಗೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ, ” ಅಂಥ ಸಂದರ್ಭದಲ್ಲಿ ಗಂಟು-ಮೂಟೆ ಕಟ್ಟಿಕೊಂಡು ಮನೆಗೆ ಹೋಗುತ್ತೇವೆ, ಮುಂದೇನು ಮಾಡಲಿಕ್ಕೆ ಆಗುತ್ತದೆ?” ಅಂತಾ ಹೇಳಿದ್ದಾರೆ. ಸದ್ಯ ಜಡೇಜಾರ ಈ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸದ್ಯ ಟೀಂ ಇಂಡಿಯಾ ಐಸಿಸಿ ಟಿ-20 ವಿಶ್ವಕಪ್ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ಪಟ್ಟಿಯಲ್ಲಿ ಪಾಕಿಸ್ತಾನ ಸತತ ನಾಲ್ಕು ಗೆಲುವು ಪಡೆದು ಸೆಮೀಸ್ಗೆ ಸೇರಿದ್ದು, ಮೂರು ಗೆಲುವು ಪಡೆದಿರುವ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದೆ.
Agar New Zealand na Afghanistan ko Hara Dia to phr ..
Ravindra Jadeja: “To phir kia, bag pack kar Kay ghar jaye gai.” 😂😂😂 #T20WorldCup21 pic.twitter.com/NmOjam8dEE— Abu Bakar Butt (@Abubakarrafibut) November 5, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post