ಟೀಂ ಇಂಡಿಯಾ ಅರಂಭಿಕ ಆಟಗಾರ ಕೆ.ಎಲ್.ರಾಹುಲ್ ಮೊದಲ ಬಾರಿಗೆ ತಮ್ಮ ಪ್ರೇಯಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಆಕೆ ಮತ್ಯಾರು ಅಲ್ಲ.. ಬಾಲಿವುಡ್ ನಟಿ ಆಥಿಯಾ ಶೆಟ್ಟಿ.. ಆಕೆಯ ಹುಟ್ಟಿದ ಹಬ್ಬದ ಸಂದರ್ಭದ ಹಿನ್ನೆಲೆಯಲ್ಲಿ ‘ಹ್ಯಾಪಿ ಬರ್ತ್ ಡೇ ಮೈ ಲವ್’ ಎಂದು ಇಬ್ಬರು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನವೇ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದವು. ಇಬ್ಬರು ಪ್ರೇಮಿಗಳು ಎಂದು ಅಭಿಮಾನಿಗಳು ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಆದರೆ ಯುವ ಜೋಡಿಯಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಕೆಎಲ್ ರಾಹುಲ್ ಈ ಸಂಗತಿಯನ್ನು ರಿವೀಲ್ ಮಾಡಿದ್ದು, ಸದ್ಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಜೋಡಿಗೆ ಶುಭಕೋರಿದ್ದಾರೆ.
2021ರ ಟಿ20 ವಿಶ್ವಕಪ್ನ ಮೊದಲ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು ಆ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿ ತಂಡ ಭರ್ಜರಿ ಜಯಗಳಿಸಿದೆ. ಇನ್ನು ನಿನ್ನೆ ನಡೆದ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ಗಳ ಭಾರೀ ಗೆಲುವು ಸಾಧಿಸಿದ ಟೀಂ ಇಂಡಿಯಾ ಪರ ರಾಹುಲ್ 18 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದ್ದರು. ರಾಹುಲ್ ಫಿಫ್ಟಿ ಬಳಿಕ ಸೇಡಿಯಂನಲ್ಲಿ ಸಂತೋಷದಿಂದ ಆಥಿಯಾ ಶೆಟ್ಟಿ ಸಂಭ್ರಮಿಸಿದ ಫೋಟೋಗಳು ಸಖತ್ ವೈರಲ್ ಆಗಿತ್ತು. ಏಕೆಂದರೆ ತನ್ನ ಲವ್ನ ಬರ್ತ್ ಡೇ ಹಿನ್ನೆಲೆಯಲ್ಲಿ ರಾಹುಲ್ ಸಿಡಿಸಿದ ಅರ್ಧ ಶತಕ ವಿಶೇಷ ಗಿಫ್ಟ್ನಂತೆ ಅಭಿಮಾನಿಗಳಿಗೆ ಕಂಡಿತ್ತು.
Happy birthday my ❤️ @theathiyashetty pic.twitter.com/CqLUbyLHrK
— K L Rahul (@klrahul11) November 5, 2021
ಇನ್ನು ನಿನ್ನೆ ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಕೆಎಲ್ ರಾಹುಲ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮೊದಲ ಸ್ಥಾನದಲ್ಲಿದ್ದು, 2007ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಇನ್ನು 2ನೇ ಸ್ಥಾನದಲ್ಲಿ ಸ್ಟೀಫನ್ ಮೈಬರ್ಗ್ ಸ್ಥಾನ ಪಡೆದುಕೊಂಡಿದ್ದು, 17 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಸದ್ಯ ಮೂರನೇ ಸ್ಥಾನವನ್ನು ಮ್ಯಾಕ್ವೆಲ್ ರೊಂದಿಗೆ ರಾಹುಲ್ ಶೇರ್ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post