ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ಗೆ ವಿದಾಯ ಹೇಳಿದ್ರಾ ಅನ್ನೋ ಚರ್ಚೆ ಜೋರಾಗಿದೆ.
ಪಂದ್ಯದ ವೇಳೆ ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದಾಗ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದರು. ಇದಕ್ಕೆ ಪ್ರೇಕ್ಷಕರು ಕೂಡ ಎದ್ದು ನಿಂತು ಗೌರವ ಸೂಚಿಸಿದರು. ಆ ಬಳಿಕ ಡ್ವೇನ್ ಬ್ರಾವೋ ಸೇರಿದಂತೆ ಸಹ ಆಟಗಾರರು ಕೂಡ ಗೇಲ್ ಅವರನ್ನು ಆಲಿಂಗನದ ಮೂಲಕ ಬರ ಮಾಡಿಕೊಂಡರು.
ಇದನ್ನೆಲ್ಲ ನೋಡಿದ ಕ್ರಿಕೆಟ್ ಜಗತ್ತು ಕ್ರಿಸ್ಗೇಲ್ ಟಿ20ಗೆ ವಿದಾಯ ಹೇಳಿದ್ರಾ ಅಂತ ಮಾತಾಡೋಕೆ ಶುರು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಸ್ಪಷ್ಟಪಡಿಸಿರುವ ಗೇಲ್.. ನಾನು ವರ್ಲ್ಡ್ ಕಪ್ ಗೇಮ್ನಲ್ಲಿ ಸಾಕಷ್ಟು ಎಂಜಾಯ್ ಮಾಡಲು ಪ್ರಯತ್ನಿಸಿದೆ. ಆದರೆ ನನಗೆ ಈ World Cup ಜರ್ನಿ ತುಂಬಾ ಬೇಸರವುಂಟು ಮಾಡಿದೆ. ನನಗೆ ವೈಯಕ್ತಿಕವಾಗಿ ನೋವಾಗಿದೆ. ನನ್ನ ಪ್ರಕಾರ ನನಗೆ ಇದು ಲಾಸ್ಟ್ ವರ್ಲ್ಡ್ಕಪ್ ಇರಬಹುದು. ಎಲ್ಲವೂ ಸಂಭಿಸಿಬಿಡುತ್ತವೆ. ಆದರೂ ನನಗೆ ಗೊತ್ತು.. ನನ್ನ ವೃತ್ತಿ ಜೀವನದಲ್ಲಿ ಹೀಗೆ ಆಗಿರೋದು ಬೇಸರದ ಸಂಗತಿ. ನಾನು ಹೇಳುವುದೇನೆಂದರೆ, ವೆಸ್ಟ್ ಇಂಡೀಸ್ ತಂಡದಿಂದ ಇನ್ಮುಂದೆ ಅನೇಕ ಪ್ರತಿಭೆಗಳು ಹೊರ ಬರುತ್ತವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post