ಬೆಂಗಳೂರು: ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಅಭಿನಂದಿಸಿ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಮೋದಿಗೆ ಪತ್ರ ಬರೆದಿದ್ದಾರೆ.
ಶ್ರೀ ಶಂಕರಾಚಾರ್ಯರು ಕರ್ನಾಟಕದ ಶೃಂಗೇರಿ ಶಾರದಾ ಪೀಠದ ಮಹಾನ್ ಸಂತ ಅಂತಹ ಸಂತನ ಪ್ರತಿಮೆ ಅನಾವರಣ ಮಾಡಿರುವುದು ಸಂತೋಷದ ವಿಚಾರ. ಇದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಶೀಘ್ರದಲ್ಲೇ ನಾನು ಕೂಡ ಕೇದಾರನಾಥದಲ್ಲಿನ ಶ್ರೀ ಶಂಕರಾಚಾರ್ಯರ ಪ್ರತಿಮೆ ಕಾಣಲು ಹಂಬಲಿಸುತ್ತಿದ್ದೇನೆ ಅಂತ ದೇವೇಗೌಡರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನವೆಂಬರ್ 5 ರಂದು ಮೋದಿ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೂತನವಾಗಿ ನಿರ್ಮಾಣಗೊಂಡಿದ್ದ ಆದಿ ಶಂಕರಚಾರ್ಯರ ಸಮಾಧಿಯನ್ನ ಲೋಕಾರ್ಪಣೆ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಆದಿ ಶಂಕರಾಚಾರ್ಯರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದು, ನಮ್ಮ ಮೈಸೂರಿನ ಖ್ಯಾತ ಶಿಲ್ಪ ಕಲಾವಿದ ಹಾಗು ಬ್ರಹ್ಮಶ್ರೀ ಕಶ್ಯಪ್ ಶಿಲ್ಪ ಕಲಾನೀಕೇತನ ಮುಖ್ಯಸ್ಥ ಅರುಣ್ ಯೋಗಿರಾಜ್ ಈ ಅದ್ಭುತವಾದ ಶಂಕರಾಚಾರ್ಯರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು; ಕೇದಾರನಾಥದಲ್ಲಿ ಕನ್ನಡಿಗನ ಕಲಾ ಕುಸುರಿ ಅನಾವರಣ
I wrote to Prime Minister Shri @narendramodi on the new #Shankaracharya statue in #Kedarnath, and how the Sringeri Sharada Peetham in Karnataka, established by the great saint, has to me always been a refined symbol of interfaith harmony. pic.twitter.com/f9D3COj7yq
— H D Devegowda (@H_D_Devegowda) November 6, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post