ಹುಬ್ಬಳ್ಳಿ: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರದಿದ್ದ ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕಾರ್ಯಕ್ಕೆ ರಾಜ್ಯದ್ಯಾಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು.. ಮೊನ್ನೆ ದಾವಣಗೆರೆ ಜಿಲ್ಲೆಯಲ್ಲಿ ಬರೋಬ್ಬರಿ 60 ಜನರು ಪುನೀತ್ ನೇತ್ರದಾನದಿಂದ ಆದರ್ಶಗೊಂಡು ತಾವು ಕೂಡ ನೇತ್ರದಾನ ಮಾಡುವುದಾಗಿ ಘೋಷಿಸಿದ್ದರು. ಇದೀಗ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲೂ ಕೂಡ ನೇತ್ರದಾನ ಮಾಡುವುದಾಗಿ ಜನರು ಕಣ್ಣಿನ ಆಸ್ಪತ್ರೆಗೆ ಬಂದು ನೋಂದಣಿ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ:ಅಪ್ಪು ಅಂದ್ರೆ ಆದರ್ಶ: ಒಂದೇ ಗ್ರಾಮದ 60ಕ್ಕೂ ಹೆಚ್ಚು ಅಭಿಮಾನಿಗಳಿಂದ ನೇತ್ರದಾನಕ್ಕೆ ನಿರ್ಧಾರ
ಪುನೀತ್ ರಾಜ್‍ಕುಮಾರ್ ಮಾನವೀಯ ಕಾರ್ಯಕ್ಕೆ ಮೆಚ್ಚಿದ ಅವಳಿ ನಗರದ ಜನರು ನಗರದ ಪ್ರತಿಷ್ಠಿತ ಎಂ.ಎನ್ ಜೋಶಿ ಕಣ್ಣಿನ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಅಪ್ಪು ಮಾದರಿಯಂತೆ ನಾವು ಕೂಡ ನೇತ್ರದಾನಕ್ಕೆ ಮುಂದಾಗಿದ್ದೇವೆ ಎಂದು ಹೇಳಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಪುನೀತ್ ಕಣ್ಣು ದಾನದ ಬಳಿಕ ಬರೋಬ್ಬರಿ 36 ಜನರು ನೇತ್ರದಾನ ಮಾಡುವುದಾಗಿ ಹೆಸರು ನೋಂದಾಯಿಸಿದ್ದಾರೆ. ಮತ್ತು ನೇತ್ರದಾನಕ್ಕಾಗಿ ದಿನನಿತ್ಯ 500 ಕ್ಕೂ ಹೆಚ್ಚು ಕರೆಗಳು ಬರ್ತಿವೆ ಎಂದು ಆಸ್ಪತ್ರೆ ತಿಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post