ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ದುಂಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನಮೀಬಿಯಾ ತಂಡಗಳ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಸೆಮೀಸ್ ರೇಸ್ನಿಂದ ಹೊರ ಬಿದ್ದಿದ್ದು, ಈ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ತವರಿಗೆ ವಾಪಸ್ ಆಗಲಿದ್ದಾರೆ.
Toss news from Dubai 🪙
India have won the toss and will field first.#T20WorldCup | #INDvNAM | https://t.co/ICh1BVKEFJ pic.twitter.com/SmN1YLWHFT
— T20 World Cup (@T20WorldCup) November 8, 2021
ಅಂದಹಾಗೇ, ಟಿ-20 ಮಾದರಿ ಕ್ರಿಕೆಟ್ನಲ್ಲಿ ನಮೀಬಿಯಾ ಹಾಗೂ ಭಾರತ ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಗ್ರೂಪ್-2 ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ನಿರ್ಗಮನ ಆಗಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿರುವ ನಮೀಬಿಯಾ ಮೂರರಲ್ಲಿ ಸೋಲುಂಡಿದೆ. ಉಳಿದಂತೆ ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಟಿ-20 ಮಾದರಿಯಲ್ಲಿ ಅವಕಾಶ ಪಡೆದ ಅಶ್ವಿನ್ಗೆ ಈ ಪಂದ್ಯದಲ್ಲೂ ಅವಕಾಶ ನೀಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post