ಕೋಟಿ ಕೋಟಿ ಹೃದಯ ಅಭಿಮಾನಿ ದೇವರುಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ. ಕರುನಾಡನ್ನು ಕಾಡಿರುವ, ಕಾಡುತ್ತಿರುವ ಸಾವು ಅಂದ್ರೆ ಅದು ದೊಡ್ಮನೆ ಹುಡುಗನದ್ದೇ. ಇಡೀ ಕರುನಾಡು ತಮ್ಮ ಮನೆ ಮಗನನ್ನು ಕಳೆದುಕೊಂಡಂತೆ ಭಾವುಕತೆಗೆ ಒಳಗಾಗಿದೆ.
ಪರಮಾತ್ಮನನ್ನು ನೋಡಲು ದಿನವಿಡೀ ಅಭಿಮಾನ ಸಾಗರ ಅಲೆ ಅಲೆಯಾಗಿ ಹರಿದು ಬರ್ತಿದೆ. ಕರುನಾಡಿನ ರಾಜಕುಮಾರ ನಮ್ಮನ್ನಗಲಿ ಇಂದಿಗೆ 11 ದಿನವಾಗ್ತಿದ್ದು, ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಪುಣ್ಯಸ್ಮರಣೆ ನಡೆಸ್ತಿದೆ.
‘ಪರಮಾತ್ಮ’ನ ಸ್ಮರಣೆ ಕಾರ್ಯದಲ್ಲಿ ಚಿತ್ರರಂಗದ ಗಣ್ಯರು ಭಾಗಿ
ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಶೋಕ ಸಾಗರದಲ್ಲಿ ಮುಳುಗಿರುವ ದೊಡ್ಮನೆ ಕುಟುಂಬ ಸಂಪ್ರದಾಯದಂತೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ 11ನೇ ದಿನದ ಕಾರ್ಯ ನಡೆಸುತ್ತಿದೆ. ಈ ಪುಣ್ಯಸ್ಮರಣೆಯಲ್ಲಿ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರಾದ ರಜನಿಕಾಂತ್, ಅಮಿತಾಬಚ್ಚನ್ ಸೇರಿದಂತೆ ಸುಮಾರು 1,500 ಜನ ಈ ಭಾಗಿಯಾಗುವ ಸಾಧ್ಯತೆ ಇದೆ. ಮನೆಯ ಮುಂಭಾಗದಲ್ಲಿ ಈಗಾಗಲೇ ಬೃಹತ್ತಾದ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ.
‘ದೊಡ್ಮನೆ’ಯಿಂದ ಅಭಿಮಾನಿ ದೇವರಿಗೆ ಕಾರ್ಯಕ್ರಮ
ಇನ್ನು ಅಪ್ಪು ಅಗಲಿಕೆಯಿಂದ ಶೋಕ ಸಾಗರದಲ್ಲಿ ಮುಳುಗಿರುವ ಅಭಿಮಾನಿ ದೇವರುಗಳಿಗಾಗಿ ದೊಡ್ಮನೆ ಕುಟುಂಬ ನವೆಂಬರ್ 9 ಅಂದ್ರೆ ನಾಳೆ ಅಪ್ಪು ಸ್ಮರಣೆಯನ್ನು ಆಯೋಜಿಸಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕಾರ್ಯಕ್ರಮ ನಡೆಯಲಲಿದೆ. ಒಟ್ಟಾರೆ ಕರುನಾಡು ಭಾಗ್ಯವಂತನನ್ನು ಕಳೆದುಕೊಂಡು ಅನಾಥವಾಗಿದೆ. ಆದ್ರೆ ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ರೂ ಅವರ ನೆನಪು ಅಜರಾಮರ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post