ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ 12 ದಿನ. ಪುನೀತ್ ಪುಣ್ಯಸ್ಮರಣೆ ನಿಮಿತ್ತ ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಅಪ್ಪು ಖಾಯಂ ಆಗಿ ಬಿರಿಯಾನಿ ತಿನ್ನುತ್ತಿದ್ದ ಹೋಟೆಲ್ ಮಾಲೀಕ ಅಪ್ಪು ಸಮಾಧಿ ಮುಂದೆ ಬಿರಿಯಾನಿ ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಪುನೀತ್ ನಗರದ ಮರಾಠ ದರ್ಶಿನಿ ಬಿರಿಯಾನಿ ಅಂದ್ರೆ ಪಂಚಪ್ರಾಣವಂತೆ. ವಾರಕ್ಕೊಮ್ಮೆ ಅಪ್ಪು ಇಲ್ಲಿಯ ಬಿರಿಯಾನಿ ತರಸಿಕೊಂಡಿ ತಿನ್ನಿತ್ತಿದ್ದರಂತೆ. ಮಾಧ್ಯಮಗಳ ಮುಂದೆ ಈ ವಿಚಾರ ಹಂಚಿಕೊಂಡ ಹೋಟೆಲ್ ಮಾಲೀಕ ನವೀನ್ ಭಾವುಕರಾಗಿದ್ದು ಅಪ್ಪು ನಮ್ಮ ಹೋಟೆಲ್ಗೆ ಬರೋದಾಗಿ ಹೇಳಿದ್ದರು.. ಆದರೆ ಇವತ್ತು ಅವರು ನಮ್ಮೊಂದಿಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಅಪ್ಪು ಇಲ್ಲ ಅಂತಾ ಜೀರ್ಣಿಸಿಕೊಳ್ಳೋಕೆ ಸಾಧ್ಯ ಆಗ್ತಾ ಇಲ್ಲ. ಅವರಿಗೆ ಯಾವಾಗಲೂ ನಾನ್ ವೆಜ್ ಊಟ ತೆಗೆದುಕೊಂಡು ಹೋಗಿ ಕೊಡ್ತಾ ಇದ್ದೆ. ನಾನ್ ವೆಜ್ ಬೇಕು ಅಂತಾ ಅನ್ನಿಸಿದಾಗ ಕಾಲ್ ಮಾಡಿ ಹೇಳ್ತಾ ಇದ್ರು.. ಆಗ ನಾನೇ ತೆಗೆದುಕೊಂಡು ಹೋಗ್ತಿದ್ದೆ. ನಮ್ಮ ಹೋಟೆಲ್ ಗೆ ಬರ್ತಿನಿ ಅಂತಾ ಹೇಳಿದ್ರು, ಅಷ್ಟೋರೊಳಗೆ ಹೀಗೆ ಆಯ್ತು. ನನಗೆ ನಿಜಕ್ಕೂ ತುಂಬಾ ನೋವಾಗ್ತಿದೆ ಆದರೆ ಅಪ್ಪು ಇವತ್ತು ಬರ್ತಾರೆ ನಾಳೆ ಬರ್ತಾರೆ ಅಂತಾ ನಾನು ಮತ್ತು ಹೋಟೆಲ್ ಸಿಬ್ಬಂದಿ ಕಾಯ್ತಾ ಇದ್ದೀವಿ ಅಂತ ಅವರು ಭಾವುಕರಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post