ಇಂದು ಮತ್ತು ನೆನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಈ ಸಲ 7 ಪದ್ಮವಿಭೂಷಣ. 10 ಪದ್ಮಭೂಷಣ. ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಮದು ಕೂಡ ಹಲವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ. ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪದ್ಮಶ್ರೀಯಲ್ಲಿ ಕನ್ನಡಿಗರು
ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, ಕರ್ನಾಟಕದ ಆರ್.ಲಕ್ಷ್ಮೀನಾರಾಯಣ ಕಶ್ಯಪ್ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಡಾ. ಬಿ. ಎನ್. ಗಂಗಾಧರ್ (ವೈದ್ಯಕೀಯ) ವಿಜಯ್ ಸಂಕೇಶ್ವರ್. ಹಾಜಬ್ಬ(ಸಾಮಾಜಿಕ ಸೇವೆ) ತುಳಸಿಗೌಡ (ಸಾಮಾಜಿಕ ಸೇವೆ) ಎಂ.ಪಿ ಗಣೇಶ್ (ಕ್ರೀಡೆ) ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post