ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿ ನ್ಯೂಜಿಲೆಂಡ್ಗೆ ಲಗ್ಗೆ ಇಟ್ಟಿದೆ. ಈ ವಿಶ್ವಕಪ್ ಬಳಿಕ ಭಾರತದೊಂದಿಗೆ ಟಿ20 ಸರಣಿಯನ್ನ ಆಡಲಿದೆ. ಅದಕ್ಕಾಗಿ ಟೀಮ್ ಇಂಡಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇನ್ನು, ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ನ್ಯೂಜಿಲೆಂಡ್ ತಂಡದಿಂದ ಪ್ರಮುಖ ಅಂಶವೊಂದನ್ನ ಭಾರತ ಕಲಿಯಬೇಕು ಎಂದು ಸೂಚಿಸಿದ್ದಾರೆ. ಟೀಮ್ ಇಂಡಿಯಾ ಅತ್ಯದ್ಭುತ ತಂಡ. ಹಾಗಾಗಿ ನ್ಯೂಜಿಲೆಂಡ್ ಅವರಿಂದ ಏನನ್ನೂ ಕಲಿಯುವ ಅವಶ್ಯಕತೆ ಇಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ತಂಡವನ್ನ ಸೋಲಿಸುವ ಶಕ್ತಿ ಇದೆ. ಆದರೂ ಟೀಮ್ ಇಂಡಿಯಾ ಖಂಡಿತವಾಗಿಯೂ ಕಲಿಯಬಹುದಾದ ಒಂದು ಪಾಠ ಇದೆ ಎಂದರು.
ಅದು ಪಾಸಿಟಿವ್ ಆಗಿ ಆಡುವುದು. ಏಕೆಂದರೆ T20 ಕ್ರಿಕೆಟ್ ಕೆಚ್ಚೆದೆಯ ಆಟಗಾರರ ಮಾದರಿ. ಇಲ್ಲಿ ಕೆಲವು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಪಾಸಿಟಿವ್ ಮೈಂಡ್ ಹೊಂದಿರಬೇಕು ಎಂದು ಸೆಹ್ವಾಗ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ಗೆ ವಿರಾಟ್ ಕೊಹ್ಲಿ ಹೇಳುತ್ತಾರಾ ಗುಡ್ ಬೈ?
ಈ ಪಾಸಿಟಿವ್ ಆಟದಿಂದಾಗಿಯೇ ನ್ಯೂಜಿಲೆಂಡ್ ಗೆದ್ದಿದೆ. ಪಂದ್ಯದ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ. ಧೈರ್ಯದಿಂದ, ಪಾಸಿಟಿವ್ ಆಗಿ ಆಡಿ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post