ಚಿಕ್ಕಮಗಳೂರು: ಸ್ಥಳೀಯರ ವಿರೋಧದ ಮಧ್ಯೆಯೂ ಬಾರ್ ಓಪನ್ ಮಾಡಿದ್ದಕ್ಕೆ ಸ್ಥಳೀಯ ಮಹಿಳೆಯರು ರೊಚ್ಚಿಗೆದ್ದು ಮದ್ಯದಂಗಡಿ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಸ್ಥಳೀಯರ ವಿರೋಧಗಳ ಮಧ್ಯೆಯೂ ಬಾರ್ ಓಪನ್ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಗ್ರಾಮದ ಮಹಿಳೆಯರು.. ಬಾರ್ಗೆ ನುಗ್ಗಿ ಅಲ್ಲಿದ್ದ ಖುರ್ಚಿ, ಟೇಬಲ್ಗಳನ್ನ ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಬಾರ್ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಸದ್ಯ ಬಾರ್ಗೆ ನುಗ್ಗಿ ಅಲ್ಲಿದ್ದ ಖುರ್ಚಿಗಳನ್ನ ಪುಡಿ ಪುಡಿ ಮಾಡಿರುವ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post