ಬಹು ನಿರೀಕ್ಷಿತ ಟಿ20 ವಿಶ್ವಕಪ್ಗೆ ನಾಳೆ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ತೆರೆ ಬೀಳಲಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಫೈನಲ್ ಪಂದ್ಯಕ್ಕೂ ಮುನ್ನ ಮಾತಾಡಿರುವ ಆಸಿಸ್ ನಾಯಕ ಆ್ಯರೋನ್ ಫಿಂಚ್, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಟಾಸ್ ಕುರಿತು ಮಾತನಾಡಿದ ಫಿಂಚ್, ನನಗೆ ಟಾಸ್ ಮುಖ್ಯ ಅಲ್ಲ. ಫೈನಲ್ ಪಂದ್ಯದಲ್ಲಿ ಅದರ ಕಡೆ ಗಮನ ನೀಡಬಾರದು. ಇದು ನಮಗೆ ಮುಳುವಾಗುವ ಸಾಧ್ಯತೆ ಇದೆ. ಪಂದ್ಯವನ್ನ ಜಯಿಸಲು ಟಾಸ್ ಎಂಬುದನ್ನೇ ನೆಚ್ಚಿಕೊಳ್ಳಬಾರದು ಎಂದು ಹೇಳಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಯಾವುದೇ ತಂಡವಾಗಲಿ, ಚೇಸಿಂಗ್ಗೆ ಹೆಚ್ಚು ಒಲವು ತೋರುತ್ತೆ. ಆದರೆ ಚೇಸಿಂಗ್ ಎಂಬುದು ಅಪಾಯದ ಮುನ್ಸೂಚನೆ. ಏಕೆಂದರೆ ಪ್ರತಿಸ್ಪರ್ಧಿ ತಂಡ ಬೃಹತ್ ಮೊತ್ತ ಕಲೆ ಹಾಕಿದ್ದೇ ಆದರೆ ಪರಿಸ್ಥಿತಿ ಹತೋಟಿಗೆ ಬರುವುದಿಲ್ಲ. ಹಾಗಾಗಿ ಮೊದಲು ಬ್ಯಾಟ್ ಮಾಡುವುದು ಅಷ್ಟೆ ಮುಖ್ಯ. ಫೈನಲ್‌ನಲ್ಲಿ ಟಾಸ್ ಏನು ಬೇಕಾದರೂ ಆಗಬಹುದು. ಎಲ್ಲದಕ್ಕೂ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.
One more sleep ⏳#T20WorldCup pic.twitter.com/u9wFKQrg2g
— T20 World Cup (@T20WorldCup) November 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post