ಬೆಂಗಳೂರು: ‘ಏಕ್ ಲವ್ ಯಾ’ ಚಲನಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿದ ನಡೆದ ಯಡವಟ್ಟು ಕುರಿತು ನಟಿ ರಚಿತಾ ರಾಮ್ ಅಪ್ಪು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ನಿನ್ನೆ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡುವ ವೇಳೆ ಪರದೆಯ ಮೇಲೆ ಚಿತ್ರದ ಗೀತೆ ಬದಲು ಅಪ್ಪು ನಮನದ ವಿಡಿಯೋ ಪ್ಲೇ ಆಗಿ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ಆ ಮೂಲಕ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಚಿತ್ರತಂಡ ಗುರಿಯಾಗಿತ್ತು. ಇನ್ನು ಈ ಕುರಿತು ‘ಏಕ್ ಲವ್ ಯಾ’ ಚಿತ್ರದಲ್ಲಿ ಅಭಿನಯಿಸಿರುವ ರಚಿತಾ ರಾಮ್ ಟ್ವೀಟ್ ಮಾಡಿ ಕ್ಷಮೆಕೋರಿದ್ದಾರೆ.
ಇದನ್ನೂ ಓದಿ:ಆಡಿಯೋ ಲಾಂಚ್ ವೇಳೆ ಅಪ್ಪು ಭಾವಚಿತ್ರದ ಮುಂದೆ ಶಾಂಪೇನ್ ಓಪನ್; ಅಚಾತುರ್ಯಕ್ಕೆ ಕ್ಷಮೆ ಕೇಳಿದ ಪ್ರೇಮ್
ನಿನ್ನೆಯ ಘಟನೆ ಬಗ್ಗೆ ನಿಮ್ಮೆಲ್ಲರಿಗೂ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನು ಕೂಡ ಚಿತ್ರದ ಭಾಗವಾಗಿರೋದ್ರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡೋ ಉದ್ದೇಶ, ಅಥವಾ ಆಲೋಚನೆ ಯಾವ ಕನ್ನಡಿಗರಿಗೂ ಇರೋಲ್ಲ.. ಅದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸಿತ್ತಾರೆಂದು ನಂಬಿದ್ದೇನೆ. ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post