ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿರುವ ಬಿಟ್ ಕಾಯಿನ್ ಪ್ರಕರಣ ಇದೀಗ ರಾಷ್ಟ್ರ ರಾಜಕಾರಣದಲ್ಲೂ ಚರ್ಚೆ ಆಗ್ತಿದೆ. ಅಂತೆಯೇ ಇಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ.. ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ವಿಲನ್ ಅಂಡ್ ಹೀರೋ
ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನಡೆದ ಅತಿ ದೊಡ್ಡ ಹಗರಣವೇ ಬಿಟ್ ಕಾಯಿನ್ ಕೇಸ್. ಇದರಲ್ಲಿ ಬಿಜೆಪಿ ಹಿರೋ ಮತ್ತು ವಿಲನ್ ಆಗಿದೆ. ಕರ್ನಾಟಕದ ಬಿಟ್ ಕಾಯಿನ್ ಹಗರಣ ಅತಿದೊಡ್ಡ ಹಗರಣ. ಸದ್ಯದ ಮಾರುಕಟ್ಟೆಯಲ್ಲಿ ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ ಇದೆ. ಕರ್ನಾಟಕದ ಬಿಜೆಪಿ ಸರ್ಕಾರ ಸಾಕ್ಷಿಗಳನ್ನ ಮುಚ್ಚಿಹಾಕುತ್ತಿದೆ. ಪ್ರಕರಣ ಹೊರಬರದಂತೆ ತಡೆಯುತ್ತಿದೆ ಎಂದು ಗಂಭೀರವಾದ ಆರೋಪ ಮಾಡಿದರು.
ಅಂತಾರಾಷ್ಟ್ರೀಯ ಹಗರಣ
ಅಂತಾರಾಷ್ಟ್ರೀಯ ಹಗರಣವನ್ನ ತನಿಖೆ ಮಾಡೋದು ಬಿಟ್ಟು ಮುಚ್ಚಿಹಾಕುತ್ತಿದೆ. ಇದು 12 ರಿಂದ 15 ದೇಶಗಳಿಗೆ ಸಂಬಂಧಿಸಿದ ಪ್ರಕರಣ.. ಇಷ್ಟಾದರೂ ಇಡಿ ಅಥವಾ ಐಟಿಗೆ ಪ್ರಕರಣವನ್ನ ವರ್ಗಾಯಿಸಿಲ್ಲ. ಹ್ಯಾಕರ್ ಶ್ರೀಕಿಯನ್ನ ನಾಲೈದು ಪ್ರಕರಣದಲ್ಲಿ 100 ದಿನ ಜೈಲಲ್ಲಿ ಇಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.
ಇಂಟರ್ ಪೋಲ್ಗೆ ಮಾಹಿತಿಯೇ ನೀಡಿಲ್ಲ
ಶ್ರೀಕಿ ಬೆಂಗಳೂರು ಮೆಜೆಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ. ಈತ ಬೇರೆ ಬೇರೆ ದೇಶಗಳ ಕಂಪನಿ, ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ. ಅದನ್ನು ವಿಚಾರಣೆ ವೇಳೆ ತಿಳಿಸಿದ್ದಾನೆ. ಆದರೆ ಕರ್ನಾಟಕ ಸರ್ಕಾರ ಈ ಬಗ್ಗೆ ಇಂಟರ್ ಪೋಲ್ಗೆ ಮಾಹಿತಿ ನೀಡಿಲ್ಲ. ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಹಗರಣ ನಡೆದಿದೆ.
₹9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್
ಇಲ್ಲಿಯವರೆಗೆ ಒಂದು ಲಕ್ಷದ 20 ಸಾವಿರ ಬಿಟ್ ಕಾಯಿನ್ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಹೀಗಂಥ ಜನರೇ ಮಾತನಾಡಿಕೊಳ್ತಿದ್ದಾರೆ. ಇವೆಲ್ಲಾ ತನಿಖೆಯಿಂದ ಹೊರಬರಬೇಕಿದೆ. ಶ್ರೀಕೃಷ್ಣನ ಹತ್ತಿರ ರಿಕವರಿ ಮಾಡಿರೋ ಬಿಟ್ ಕಾಯಿನ್ ಮಿಸ್ ಆಗಿವೆ. 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ ಆಗಿವೆ. ಇದು ತುಂಬಾ ಇಟರೆಸ್ಟಿಂಗ್ ವಿಚಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಶ್ರೀಕೃಷ್ಣ ಪೋಲಿಸ್ ಕಸ್ಟಡಿಯಲ್ಲಿದ್ದಾಗ ಬಿಟ್ ಕಾಯಿನ್ ವರ್ಗಾವಣೆ ಆಗಿವೆ. 1 ಡಿಸೆಂಬರ್ 2020 ಮತ್ತು 14 ಎಪ್ರೀಲ್ 2021ರಲ್ಲಿ ವರ್ಗಾವಣೆಯಾಗಿದೆ. ಇದೆ ಸಂದರ್ಭದಲ್ಲಿ 5240 ಕೋಟಿ ರೂಪಾಯಿ ವರ್ಗಾವಣೆಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು ಎಂದು ದಾಖಲೆಗಳನ್ನ ತೋರಿಸಿದರು.
ಮೋದಿ-ನಡ್ಡಾ ಉತ್ತರ ನೀಡಬೇಕು..!
ಸಿಎಂ ಬಸವರಾಜ್ ಬೊಮ್ಮಾಯಿ ಗುರುವಾರ ಪ್ರಧಾನಿ ಭೇಟಿಯ ನಂತರ ಹೇಳಿಕೆ ನೀಡುತ್ತಾರೆ. ಪ್ರಧಾನಿ ಹೇಳಿದ್ದಾರೆ ಬಿಟ್ ಕಾಯಿನ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು. ಪ್ರಧಾನಿ ಮತ್ತು ನಡ್ಡಾ ಈ ಬಗ್ಗೆ ಉತ್ತರ ನೀಡಬೇಕು. ಇದರ ಹಿಂದೆ ಯಾರಿದ್ದಾರೆ, ಪೋಲಿಸರ ಪಾತ್ರವೇನು? ಪೊಲೀಸ್ ವಶದಲ್ಲಿದ್ದ ಬಿಟ್ ಕಾಯಿನ್ ಎಲ್ಲಿಗೆ ಹೋಯಿತು? ಶ್ರೀಕಿ ಜೈಲಿನಿಂದ ಬಿಡುಗಡೆಯಾದ ನಂತರ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು
ಇದರಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪಾತ್ರವೇನಿದೆ? ಬಿಜೆಪಿ ಸರ್ಕಾರ ಈ ಪ್ರಕರಣದ ತನಿಖೆ ಮಾಡಲು ಸಾದ್ಯವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಬೇಕು. ಚೌಕಿದಾರ್ ಈ ವಿಚಾರದಲ್ಲಿ ಸುಮ್ಮನೆ ಯಾಕೆ ಕುಳಿತಿದ್ದಾರೆ. ಪ್ರಧಾನಿಗೆ ಅಮೆರಿಕ ಪ್ರವಾಸದಲ್ಲಿದ್ದಾಗ ಈ ಬಗ್ಗೆ ಪ್ರಸ್ತಾಪಿಸಿ ಪತ್ರ ಬರೆಯಲಾಗಿತ್ತು. ಆದರೂ ಯಾಕೆ ಸುಮ್ಮನೆ ಕುಳಿತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
India’s biggest ever “Bitcoin Scam Coverup” under the Karnataka BJP Government!
Intrigue, Whitewash, Concealment, Deception smack of a deep-rooted conspiracy!
Why were Interpol/NIA/ED/SFIO kept in the dark till the very end?Our Statement-: pic.twitter.com/l9BeIZU436
— Randeep Singh Surjewala (@rssurjewala) November 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post