ಸೆಕ್ಯೂರಿಟಿ ಗಾರ್ಡ್ ಆಗಿದ್ದೋನಿಗೆ ಕೋಟಿ ಸಂಪತ್ತಿನ ಒಡೆಯನಾಗೋ ಕನಸು ಹುಟ್ಟಿಕೊಂಡಿತ್ತು. ಕೋಟಿ ಕುಬೇರನಾಗಲು ಮಾಡಿದ್ದು ಮಾತ್ರ ಕನ್ನ ಹಾಕೋ ಕೆಲಸ. ಒಂದೇ ಸಲಕ್ಕೆ ಶ್ರೀಮಂತನಾಗೋ ಆಸೆಗೆ ವಜ್ರದ ಉಂಗುರಗಳನ್ನೇ ಎಗರಿಸಿದ್ದ. ಆದರೇ ವಜ್ರ ದೋಚಿದ್ದ ಖದೀಮ ಸದ್ಯ ಕಬ್ಬಿಣದ ಸರಳುಗಳ ಹಿಂದೆ ಸೆರೆಯಾಗಿದ್ದಾನೆ.
ಯೆಸ್.. ಚಿಕ್ಕಬಳ್ಳಾಪುರದವನಾದ ಮಂಜುನಾಥ್ ಅಂತಿಂಥಾ ಕಳ್ಳನಲ್ಲ. ದುಡ್ಡು ಮಾಡೋ ಆಸೆಗೆ ಸೀದಾ ಡೈಮಂಡ್ ರಿಂಗ್ಗಳನ್ನೇ ದೋಚಿರೋ ಖದೀಮ. ಆದರೆ ಕದ್ದ ಡೈಮಂಡ್ ರಿಂಗ್ಗಳಿಂದಾನೇ ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ವಿಲ್ಲಾವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಮಂಜುನಾಥ್, ವಿಲ್ಲಾಗೆ ಬರ್ತಿದ್ದ ಶ್ರೀಮಂತರನ್ನು ಕಂಡು ತಾನು ಅವರಂತೆ ಕುಬೇರನಾಗಬೇಕು ಅಂತಾ ಕನಸು ಕಂಡಿದ್ದಾನೆ. ಇದಕ್ಕಾಗಿ ವಿಲ್ಲಾದಲ್ಲಿ ವಾಸವಿದ್ದ ವಿದೇಶಿ ಪ್ರಜೆಯ ಮೂರು ಡೈಮಂಡ್ ರಿಂಗ್ ಎಗರಿಸಿದ್ದಾನೆ.
ಇದನ್ನೂ ಓದಿ: ಬಂಗಾರಕ್ಕಿಂತಲೂ ಹೆಚ್ಚು ಬಿಟ್ ಕಾಯಿನ್ ಮೌಲ್ಯ: ಹೂಡಿಕೆ ಮಾಡುವ ಮುನ್ನ ಈ ಸ್ಟೋರಿ ಓದಿ
ಕದ್ದ ಡೈಮಂಡ್ ರಿಂಗ್ ಮಾರಲು ಮಂಜುನಾಥ್ ಬೆಂಗಳೂರಿಗೆ ಬಂದಿದ್ದಾನೆ. ಆದರೆ ಮಂಜುನಾಥ್ ಮೇಲೆ ಅನುಮಾನಗೊಂಡ ವಜ್ರದ ವ್ಯಾಪ್ಯಾರಿಗಳು ಪೊಲೀಸರಿಗೆ ಮಾಹಿತಿ ನೀಡ್ತಾರೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಚಾಲಾಕಿ ಮಂಜುನಾಥ್ನನ್ನು ಬಂಧಿಸಿದ್ದಾರೆ.
ಒಟ್ನಲ್ಲಿ ಆರೋಪಿ ಮಂಜುನಾಥ್ಗೆ ತಾನು ಕದ್ದ ವಜ್ರದ ಉಂಗುರಗಳೇ ಉರುಳಾಗಿದ್ದು, ಕದ್ದಷ್ಟೇ ಸಲೀಸಾಗಿ ಮಾರಾಟ ಮಾಡಲು ಸಾಧ್ಯವಾಗದೇ ಜೈಲು ಸೇರಿದ್ದಾನೆ.ಕೋಟಿ ಕುಬೇರನಾಗಬೇಕು ಅಂತಾ ಕನಸು ಕಂಡಿದ್ದೇನೋ ಸರಿ. ಆದರೆ ಕಳ್ಳತನದ ಮೂಲಕ ಆ ಕನಸು ನನಸು ಮಾಡಲು ಹೊರಟ್ಟಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post