ಇತ್ತೀಚಿಗಷ್ಟೇ ತಮಗಿಂತ ಚಿಕ್ಕ ವಯಸ್ಸಿನವರೊಂದಿಗೆ ಡೇಟಿಂಗ್ ಮಾಡವುದರಲ್ಲಿ ತಪ್ಪೇನಿಲ್ಲ ಎಂದಿದ್ದ ರಶ್ಮಿಕಾ ಮಂದಣ್ಣ ಇದೀಗ ಹುಡುಗರು ಶರ್ಟ್‍ಲೆಸ್ ಆಗಿದ್ರೆ ನಂಗೆ ಇಷ್ಟವಾಗೋದಿಲ್ಲ ಎಂದು ಹೇಳಿದ್ದಾರೆ. ಟಾಲಿವುಡ್, ಬಾಲಿವುಡ್ ಎರಡು ಚಿತ್ರರಂಗದಲ್ಲೂ ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಯಾವುದೇ ವಿಷಯದ ಬಗ್ಗೆ ಮಾತನಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.
ಕೊಡಗಿನ ಕ್ಯೂಟಿ ಇತ್ತೀಚೆಗಷ್ಟೇ ಡೇಟಿಂಗ್ ಆ್ಯಪ್ ಸಂಬಂಧಿಸಿದ ಟಾಕ್ ಶೋನಲ್ಲಿ ಭಾಗಿ ಆಗಿದ್ದರು. ಆಗ ರಶ್ಮಿಕಾಗೆ ಡೇಟಿಂಗ್ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ರಶ್ಮಿಕಾ ಎಲ್ಲಾ ಪ್ರಶ್ನೆಗಳಿಗೂ ನೇರವಾಗಿಯೇ ಉತ್ತರಿಸಿದ್ದಾರೆ. ಹುಡುಗರ ಪ್ರೊಫೈಲ್ ಫೋಟೋ ಹೇಗಿರಬೇಕು? ನಿಮಗೆ ಹುಡುಗ ಫಿಟ್ ಆಗಿದ್ರೆ ಇಷ್ಟನಾ? ಎಂಬ ಪ್ರಶ್ನೆಗೆ ರಶ್ಮಿಕಾ ಚೆನ್ನಾಗಿ ವರ್ಕೌಟ್ ಮಾಡಿ, ದೇಹವನ್ನು ಫಿಟ್ ಆಗಿರಿಸಿಕೊಳ್ಳುವ ಹುಡುಗರು ನನಗೆ ಇಷ್ಟವಾಗುತ್ತಾರೆ. ಆದ್ರೆ ಹುಡುಗರು ತಮ್ಮ ಪ್ರೊಫೈಲ್ ಪೋಟೋಗೆ ಶರ್ಟ್‍ಲೆಸ್ ಫೋಟೋವನ್ನು ಹಾಕಿದ್ರೆ ಅದು ನನಗೆ ಇಷ್ಟವಾಗುವುದಿಲ್ಲ ಅಂತ ಉತ್ತರಿಸಿದ್ದಾರೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ‘ಪುಷ್ಪ’ದಲ್ಲಿ ಐಟಂ ಸಾಂಗ್ಗೆ ಸೊಂಟ ಬಳುಕಿಸ್ತಾರಾ ಸಮಂತಾ?
ಇನ್ನು ಹುಡುಗರು ಯಾಕೆ ಶರ್ಟ್‍ಲೆಸ್ ಫೋಟೋವನ್ನು ತಮ್ಮ ಪ್ರೊಫೈಲ್ಗೆ ಹಾಕುತ್ತಾರೆ ಅನ್ನೋದು ನನಗೆ ಅರ್ಥವಾಗುವುದೇ ಇಲ್ಲ. ಈ ವಿಚಾರದಲ್ಲಿ ನಾನು ಸ್ವಲ್ಪ ಹಳೆಯ ಕಾಲದ ಆಲೋಚನೆಯನ್ನು ಹೊಂದಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ಇದನ್ನೂ ಓದಿ:‘ಸಮಂತಾ ಪ್ರೀತಿ ಪ್ರಾಮಾಣಿಕವಾದದ್ದು..’ ಮೆಗಾಸ್ಟಾರ್ ಸೊಸೆಯ ಇಂಟ್ರೆಸ್ಟಿಂಗ್ ಕಮೆಂಟ್ಸ್
ಇದನ್ನೂ ಓದಿ:ಪುಷ್ಪಾ 3 ನೇ ಸಾಂಗ್ನಲ್ಲಿ ಕಿಚ್ಚಿಟ್ಟ ಕರ್ನಾಟಕ ಕ್ರಶ್; ಹಾಟ್ ರಶ್ಮಿಕಾ ಲುಕ್, ವೈಯ್ಯಾರ ಫುಲ್ ಟ್ರೆಂಡ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post