ಕನ್ನಡದ ನಟಿ ಮನಿಯರು ಈಗ ಹೊಸ ಬಾಳಿನ ಹೊಸ್ತಿಲಿಗೆ ಕಾಲಿಡಲು ಸಜ್ಜಾಗಿದ್ದು, ಮೊನ್ನೆ ಮೊನ್ನೆಯಷ್ಟೆ ಕನ್ನಡ, ತೆಲುಗು ಭಾಷೆಗಳಲ್ಲಿ ಮಿಂಚುತ್ತಿರುವ ತ್ರಿನಯನಿ ಖ್ಯಾತಿಯ ಆಶಿಕಾ ಪಡುಕೋಣೆ ಅವರ ಮದುವೆ ಸಂಭ್ರಮವನ್ನ ನಿಮಗಾಗಿ ನೀಡಿದ್ವಿ. ಈಗ ಆ ಸಾಲಿಗೆ ನಟಿ ಕಾವ್ಯಾ ಗೌಡ ಅವರು ಸೇರ್ಪಡೆಯಾಗುತ್ತಿದ್ದಾರೆ…
ಕಾವ್ಯ ಅವರು ಸದ್ಯದಲ್ಲಿಯೇ ಸೋಮಶೇಖರ್ ಅವರ ಜೊತೆ ಸಪ್ತಪದಿ ತುಳಿಯಲಿದ್ದು, ಸದ್ಯ ಫ್ರೇಂಡ್ಸ್ ಜೊತೆ ಬ್ಯಾಚುಲರೇಟ್ ಪಾರ್ಟಿಯಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಕಾವ್ಯ ಅವರ ಜೀವನದ ಮಧುಕ್ಷಣಗಳ ಝಲಕ್ ಇಲ್ಲಿದೇ ನೋಡಿ…
ಇನ್ನೂ ಸ್ನೇಹಿತರ ಜೊತೆ ತಮ್ಮ ಬ್ಯಾಚುಲರ್ ಲೈಫ್ನ ಕೊನೆಯ ಪಾರ್ಟಿ ಎಂಜಾಯ್ ಮಾಡಿರುವ ಕಾವ್ಯ ಅವರು ಪಿಂಕ್ ಡ್ರೆಸ್ನಲ್ಲಿ ಮಿಂಚುತ್ತಿದ್ದರು. ಹೊಲ್ ಪಾರ್ಟಿಯನ್ನ ಪಿಂಕ್ ಥೀಮ್ನಲ್ಲಿಯೇ ಅರೆಂಜ್ ಮಾಡಲಾಗಿದ್ದು, ಕಾವ್ಯ ಅವರ ಸ್ನೇಹಿತರೆಲ್ಲ ಗ್ರೇ ಕಲರ್ಲ್ಲಿ ಸಖತ್ ಆಗಿ ಕಣುತ್ತಿದ್ದರು. ಇನ್ನು ಫ್ಯಾಮಿಲಿಗೆ ಪರ್ಪಲ್ ಕಲರ್ನ್ನ ಡ್ರೆಸ್ ಕೊಡ್ ಆಗಿ ಮಾಡಲಾಗಿತ್ತು.
ಒಟ್ನಲ್ಲಿ ಕಾವ್ಯ ಅವರು ಸದ್ಯದಲ್ಲಿಯೇ ವಿವಾಹ ಎಂಬ ಪವಿತ್ರ ಬಂಧನಕ್ಕೆ ಒಳಗಾಗುತ್ತಿದ್ದು, ತಮ್ಮ ಮದುವೆಯ ಅದ್ಭುತ ಕ್ಷಣಗಳನ್ನ ಎಂಜಾಯ್ ಮಾಡುತ್ತಿದ್ದಾರೆ…
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post