ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ನಲ್ಲಿ ಬೆಂಗಳೂರಿನ ಶ್ರೀನಿವಾಸ್ ಗೌಡ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಿರ್ಗಿಸ್ತಾನ್‌ದಲ್ಲಿ ನಡೆದ ಇಂಟರ್ ನ್ಯಾಷನಲ್ ಪವರ್ ಲಿಫ್ಟಿಂಗ್ನಲ್ಲಿ ಮೊದಲ ಬಾರಿ ಭಾಗವಹಿಸಿದ್ದ ಶ್ರೀನಿವಾಸ್ ಗೌಡ, ಎರಡು ಚಿನ್ನದ ಪದಕಗಳನ್ನ ಗೆದ್ದಿದ್ದಾರೆ.
100 ಕೆ.ಜಿ. ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀನಿವಾಸ್ ಗೌಡ, ಒಟ್ಟು 275 ಕೆ.ಜಿ. ತೂಕ ಡೆಡ್ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಎಮ್ಬಿಬಿಎಸ್ ವಿದ್ಯಾರ್ಥಿಯಾಗಿರುವ ಶ್ರೀನಿವಾಸ ಗೌಡ, ಈ ಹಿಂದೆ ನ್ಯಾಷನಲ್ RAW ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲೂ ಅನೇಕ ಪದಕಗಳನ್ನ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಈ ಕುರಿತು ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಚಿನ್ನದ ಪದಕ ವಿಜೇತ ಶ್ರೀನಿವಾಸ ಗೌಡ, ನನ್ನ ಕನಸು ನನಸಾಗಿದೆ. ನಾನು ಯಾವಾಗಲೂ ದೇಶವನ್ನ ಪ್ರತಿನಿಧಿಸಬೇಕೆಂದು ಹಂಬಲಿಸುತ್ತಿದ್ದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ದಿಸಿ ದೇಶಕ್ಕೆ ಕೀರ್ತಿ ತರಬೇಕೆಂದು ಬಯಸಿದ್ದೆ ಎಂದು ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post