ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ನುಡಿ ನಮನಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಗಾಯತ್ರಿ ವಿಹಾರ್ ಮೈದಾನದ ಮಂಟಪದಲ್ಲಿ ಇದಕ್ಕಾಗಿ ಭಾರೀ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಪುನೀತ್ ರಾಜಕುಮಾರ್ಗೆ ನಮನ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ಸ್ಟೇಜ್ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 2,000 ಆಸನಗಳನ್ನ ವ್ಯವಸ್ಥೆ ಮಾಡಲಾಗಿದೆ. ರಾಜಕುಮಾರ್ ಕುಟುಂಬಕ್ಕೆ 2 ಸಾಲುಗಳನ್ನ ಮೀಸಲು ಇಡಲಾಗಿದೆ. ಪುನೀತ್ ನುಡಿ ನಮನಕ್ಕೆ ಕಾಲಿವುಡ್, ಬಾಲಿವುಡ್, ಟಾಲಿವುಡ್ ಗಣ್ಯರು ಆಗಮಿಸುತ್ತಿದ್ದಾರೆ.
ಇನ್ನು, ಬಹುಭಾಷಾ ನಟ ಪ್ರಕಾಶ್ ರೈ ಹಾಗೂ ಶ್ರೀಕಾಂತ್ ಹೈದರಾಬಾದ್ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ಗಾಯತ್ರಿ ವಿಹಾರ್ ಮೈದಾನದ ಮಂಟಪತ್ತ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ‘ಸೂರ್ಯ’ನೇ ಟಾರ್ಗೆಟ್, ಹಲ್ಲೆ ಮಾಡಿದ್ರೆ ₹1 ಲಕ್ಷ ಘೋಷಣೆ -‘ಜೈ ಭೀಮ್’ ಹೊಸ ವಿವಾದ ಏನು ಗೊತ್ತಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post