ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರಿಗೆ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿದೆ. ವಾರ್ನರ್ ಈಗ ತಮಗೆ ಸಿಕ್ಕ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮ ಕುಟುಂಬಕ್ಕೆ ಸಮರ್ಪಿಸಿದ್ದಾರೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕಳಪೆ ಫಾರ್ಮ್‌ನಲ್ಲಿದ್ದರು ವಾರ್ನರ್. ಐಪಿಎಲ್ ಬಳಿಕ ಟಿ20 ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಆಡಿದ ಏಳು ಪಂದ್ಯಗಳಲ್ಲಿ ವಾರ್ನರ್ ಮೂರು ಅರ್ಧಶತಕಗಳೊಂದಿಗೆ 289 ರನ್ ಸಿಡಿಸಿದ್ದರು. ಇತ್ತ ಫೈನಲ್ ಪಂದ್ಯದಲ್ಲೂ ವಾರ್ನರ್, ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post