ಬೆಂಗಳೂರು: ಬೆಲ್ ಬಾಟಮ್ ಖ್ಯಾತಿಯ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುತ್ತಿರುವ ” ಬನಾರಸ್” ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಚಿತ್ರತಂಡ ಇಂದು ಬೆಳಿಗ್ಗೆ ಪೋಸ್ಟರ್ ಲಾಂಚ್ ಮಾಡಿದೆ.
ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜಕುಮಾರ್, ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುನೀತ್ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಮೌನಚರಣೆ ಮಾಡಿ ಪೋಸ್ಟರ್ ಲಾಂಚ್ ಮಾಡಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಚೊಚ್ಚಲ ಚಿತ್ರ ಇದಾಗಿದ್ದು ಅಂದುಕೊಂಡಂತೆ ನಡೆದಿದ್ದರೆ ಅಪ್ಪು ಈ ಪೋಸ್ಟ್ರ್ನ್ನ ರಿಲೀಸ್ ಮಾಡಬೇಕಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಚಿತ್ರತಂಡ ಅವರ ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಿ ಗೌರವ ಸಲ್ಲಿಸಿದೆ.
ಬನಾರಸ್ ಚಿತ್ರದಲ್ಲಿ ನಾಯಕನಾಗಿ ಝೈದ್ ಖಾನ್ ನಟಿಸಿದ್ರೆ, ನಾಯಕಿಯಾಗಿ ಪಂಚತಂತ್ರ, ಮತ್ತು ರಾಬರ್ಟ್ ಖ್ಯಾತಿಯ ನಟಿ ಸೋನಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಲಾಂಚ್ ಬಳಿಕ ಅಂಬರೀಶ್ ಸಮಾಧಿಗೂ ಬನಾರಸ್ ಟೀಮ್ ನಮನ ಸಲ್ಲಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post