ದಕ್ಷಿಣ ಕನ್ನಡ: ಭೂಗತ ಪಾತಕಿ ರವಿ ಪೂಜಾರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಂಟ್ವಾಳದಲ್ಲಿ ದಾಖಲಾಗಿದ್ದ ಪ್ರಕರಣವನ್ನ ಕೋರ್ಟ್ ಖುಲಾಸೆಗೊಳಿಸಿದೆ.
25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಜೀವಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದ ದಾಖಲಾಗಿದ್ದ ಪ್ರಕರಣವನ್ನ ಜೆಎಂಎಫ್ಸಿ ಕೋರ್ಟ್ ರದ್ದು ಮಾಡಿದೆ. ಜುಲೈ 14, 2010ರಲ್ಲಿ ರವಿ ಪೂಜಾರಿ ವಿರುದ್ಧ ವೆಂಕಟರಮಣ ಭಟ್ ಅನ್ನೋರು ದೂರು ದಾಖಲಾಲಿಸಿದ್ದರು.
ತನಿಖೆ ನಡೆಸಿದ್ದ ಭಂಟ್ವಾಳ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರು. ಇನ್ನು ರವಿ ಪೂಜಾರಿ ವಿರುದ್ಧ ಒಟ್ಟು 47 ಅಪರಾಧ ಪ್ರಕರಣಗಳು ಇದ್ದು, ಅದರಲ್ಲಿ ಒಂದು ಕೇಸಲ್ಲಿ ಮಾತ್ರ ರಿಲೀಫ್ ಸಿಕ್ಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]newsfirstlive.com
Discussion about this post